ಉಜಿರೆ: ಸಿಂಗಾಪುರದಲ್ಲಿ ನಡೆದ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಉಜಿರೆಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಈಶಾ ಶರ್ಮ ಕಂಚಿನ ಪದಕವನ್ನು ಪಡೆದುಕೊಂಡಿದ್ದಾಳೆ. ಈಕೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ಜಯ ಗಳಿಸುವುದರ ಮೂಲಕ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾರೆ.
ಇವಳು ಚಾಂಪಿಯನ್ ಶಿಪ್ನಲ್ಲಿ ಅತಿ ಹೆಚ್ಚು ಅಂಕಗಳಿಸಿದ ತೇಜಸ್ವಿನಿ ಸಾಗರ್ ಅವರನ್ನು ನಾಲ್ಕನೇ ಸುತ್ತಿನಲ್ಲಿ ಸೋಲಿಸಿದರೂ ಒಟ್ಟು ಅಂಕಗಳಿಕೆಯಿದ ತೃತೀಯ ಸ್ಥಾನ ಪಡೆದುಕೊಳ್ಳಬೇಕಾಯಿತು.
ಈಕೆ ಫಿಲಿಫೈನ್ಸ್ ಮತ್ತು ಸಿಂಗಾಪುರ ಆಟಗಾರರೊಂದಿಗೆ ಸೆಣಸಿ ಉತ್ತಮ ಪ್ರದರ್ಶನ ನೀಡಿದ್ದಾಳೆ. ಇವಳ ಈ ಸಾಧನೆಗೆ ಫೈಡ್ ನಿಂದ ಡಬ್ಯೂಸಿಎಂ (ವುಮನ್ಕ್ಯಾಂಡಿಡೇಟ್ ಮಾಸ್ಟರ್) ಪುರಸ್ಕಾರವನ್ನು ಪಡೆದಿರುತ್ತಾಳೆ. ಕರ್ನಾಟಕದಲ್ಲಿ ಈ ಪುರಸ್ಕಾರಕ್ಕೆ ಪಾತ್ರಳಾದ ಎರಡನೇ ವಿದ್ಯಾರ್ಥಿನಿ ಈಶಾ ಶರ್ಮ.
ಈಕೆ ಡಾ ಶ್ರೀಹರಿ ಮತ್ತು ಡಾ ವಿದ್ಯಾ ಅಭಯ್ ಹಾಸ್ಪಿಟಲ್ ಬೆಳ್ತಂಗಡಿ ಇವರ ಎರಡನೆ ಪುತ್ರಿ. ಶಾಲೆಯ ಪ್ರಾಂಶುಪಾಲರಾದ ಶ್ರೀ ಮನಮೋಹನ್ ನಾಯ್ಕ್ ಇವಳಿಗೆ ಪೆÇ್ರೀತ್ಸಾಹದೊಂದಿಗೆ ಅಭಿನಂದನೆಗಳನ್ನು ಸಲ್ಲಿಸಿದರು.