ಸಿಬಿಐ ಮತ್ತು ಇಂಟರ್ ಪೋಲ್ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ವ್ಯಕ್ತಿ ಸ್ಯಾಮ್ ಪೀಟರ್

Spread the love

ಸಿಬಿಐ ಮತ್ತು ಇಂಟರ್ ಪೋಲ್ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ವ್ಯಕ್ತಿ ಸ್ಯಾಮ್ ಪೀಟರ್

ಮಂಗಳೂರು: NCIB Director ಎಂದು ಹೇಳಿ ಕೊಂಡು ದರೋಡೆಗೆ ಸಂಚು ರೂಪಿಸಿದ ಸ್ಯಾಮ ಪೀಟರ್ ದಸ್ತಗಿರಿ ಮಾಡಿ ತನಿಖೆ ನಡೆಸಿದ ವೇಳೆ ಆತ ಸಿಬಿಐ ತನಿಖಾ ಸಂಸ್ಥೆಗೆ ಬೇಕಾಗಿರುವ ವ್ಯಕ್ತಿ ಎಂದು ತಿಳಿದು ಬಂದಿದೆ ಎಂದು ನಗರ ಪೊಲೀಸ್ ಕಮೀಷನರ್ ಡಾ ಹರ್ಷ ತಿಳಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರಕಾರದ Govt. of India NCIB Director ಎಂಬ ಲಾಂಛನ ಉಪಯೋಗಿಸಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ದರೋಡೆಗೆ ಸಂಚು ನಡೆಸುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸಿದ್ದು, ಬಂಧಿತ ಆರೋಪಿಗಳ ವಶದಿಂದ ಸುಮಾರು 20 ಲಕ್ಷ ಮೌಲ್ಯದ 2 ಕಾರು (ಮಹೀಂದ್ರಾ TUV 300, XUV ಕಾರು) , 1- ಪಿಸ್ತೂಲ್, 1-ರಿವಾಲ್ವರ್ ಮತ್ತು 8 ಜೀವಂತ ಗುಂಡುಗಳನ್ನು ಹಾಗು ಅವರಲ್ಲಿದ್ದ 10 ಮೊಬೈಲ್ ಪೋನ್ ಗಳನ್ನು ವಶ ಪಡಿಸಿಕೊಂಡು ತನಿಖೆ ನಡೆಸಲಾಗಿದೆ.

ಸಿಬಿಐ ಮತ್ತು ಇಂಟರ್ ಪೋಲ್ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಸ್ಯಾಮ ಪೀಟರ್ ನು ಹಲವು ರಾಜ್ಯಗಳಲ್ಲಿ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿ ಜನರಿಂದ , ಬ್ಯಾಂಕ್ ಹಾಗು ಮತ್ತಿತರ ಹಣಕಾಸು ಸಂಸ್ಥೆ, ಮತ್ತು ಇತರ ಸೂಕ್ಷ್ಮವಾದ ವಿಷಯಗಳಲ್ಲಿ ತನಗೆ ಅಧಿಕಾರ ವಿರದಿದ್ದರೂ ಕೂಡ ಕೆಲಸ ಮಾಡಿ ಕೊಡುವುದಾಗಿ ಹೇಳಿ ಹಣ ಪಡೆದು ಮೋಸ ಮಾಡುತ್ತಿರುವ ವಿಷಯ ತನಿಖೆಯಿಂದ ದೃಡ ಪಟ್ಟಿರುತ್ತದೆ.

ಸ್ಯಾಮ್ ಪೀಟರ್ ತನ್ನ ಬಗ್ಗೆ ಯಾರಿಗೂ ಗೊತ್ತಾಗದಂತೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ತನ್ನನ್ನು ಗುರುತಿಸಿಕೊಂಡು ಒಂದು ಕಡೆ ಅಪರಾಧ ನಡೆಸಿ ಮತ್ತೊಂದು ಕಡೆ ಹೋಗಿ ವಾಸ ಮಾಡಿದ ಸಮಯ ತನ್ನ ಹೆಸರನ್ನು ಬದಲಾಯಿಸಿ ಕೊಳ್ಳುತ್ತಿದ್ದನು.

ಉದಾ: ಈತನ Birth Name ಆಂಟನಿ ಎಂದಿದ್ದು, ಅದನ್ನು ಯಾರಿಗೂ ಗೊತ್ತಾಗಂತೆ ಮುಚ್ಚಿಟ್ಟು, ಬೇರೆ ಬೇರೆ ಹೆಸರಿನಿಂದ ಮೋಸ ಮಾಡುವ ಉದ್ದೇಶದಿಂದಲೇ ಹಲವು ಹೆಸರುಗಳಿಂದ ಗುರುತಿಸಿ ಕೊಂಡಿರುತ್ತಾನೆ.

ಕರ್ನಾಟಕದ ಕೊಡಗಿನಲ್ಲಿದ್ದಾಗ ರಾಹುಲ್ ಪೀಟರ್ ಎಂದು, ಮಹಾರಾಷ್ಟ್ರದಲ್ಲಿ ಸ್ಯಾಮ್ ಪೀಟರ್ ಎಂದು, ಉತ್ತರದ ಪ್ರದೇಶದಲ್ಲಿ ರಾಜೇಶ್ ರಾಬಿನ್ ಸನ್ ಎಂದು, ಇದೇ ರೀತಿ ಬೇರೆ ಬೇರೆ ಕಡೆ ರೀತು ರಿಚರ್ಡ್, ರಾಯ್ ಜೇಕಬ್, ರಾಬಿನ್ ರಿಚರ್ಡ್ ಸನ್, ರಿಚರ್ಡ್ ರಾಬಿನ್ ಸನ್ ಎಂಬ ಹೆಸರುಗಳನ್ನು ಇಟ್ಟುಕೊಂಡು ಜನರಿಗೆ ಮೋಸ ವಂಚನೆ ಮಾಡುತ್ತಿದ್ದನು.

ಆರೋಪಿ ಸ್ಯಾಮ್ ಪೀಟರ್ ನು ತನ್ನ ಎರಡು ರಾಜ್ಯಗಳಿಂದ ಬೇರೆ ಬೇರೆ ಹೆಸರಿನಲ್ಲಿ ಪಾಸ್ ಪೋರ್ಟ್ ಹೊಂದಿರುತ್ತಾನೆ.

ಕೇರಳ ರಾಜ್ಯದಿಂದ ರಾಜೇಶ್ ರಾಬಿನ್ ಸನ್ @ ರಾಯ ಜೇಕೆಬ್ ಎಂಬ ಹೆಸರಿನಲ್ಲಿ ಪಡೆದ ಪಾಸ್ ಪೋರ್ಟ್ ನಂ; A- 626921 ಪಾಸ್ ಪೊರ್ಟ್ ನಂಬರ್ ಗೊತ್ತಾಗಿದ್ದು, ಈ ಬಗ್ಗೆ ಸಿಬಿಐ ರವರು ತನಿಖೆ ನಡೆಸುತ್ತಿದ್ದಾರೆ.
ಒರಿಸ್ಸಾ ರಾಜ್ಯದಿಂದ ಸ್ಯಾಮ್ ಪೀಟರ್ ಎಂಬ ಹೆಸರಿನಲ್ಲಿ ಪಡೆದ ಪಾಸ್ ಪೋರ್ಟ್ ನಂ; M 4929462 ಈತನು ದೇಶದ ವಿವಿಧ ರಾಜ್ಯಗಳಲ್ಲಿ ಅಪರಾಧ ಮಾಡುತ್ತಾ ನಿರಂತರವಾಗಿ ತಪ್ಪಿಸಕೊಂಡು ಪೊಲೀಸರಿಗೆ ಸಿಗದೇ ಬೇರೆ ಬೇರೆ ಕಡೆ ವಾಸ ಮಾಡಿಕೊಂಡು ಅಪರಾಧ ಎಸಗುತ್ತಿದ್ದು, ಈ ತನ ಪತ್ತೆಯಿಂದ ಅಂತರ್ ರಾಜ್ಯ ಮಟ್ಟದ ಸುಮಾರು 14 ಕೇಸುಗಳು ಪತ್ತೆಯಾಗಿರುತ್ತದೆ.

ಈತನು ವಿರುದ್ದ ಸಿಬಿಐ, ಗಾಜಿಯಾ ಬಾದ್, ಮಹರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಚತ್ತಿಸ್ ಗಡ, ಬಿಹಾರ, ಜಾರ್ಕಾಂಡ್, ಮಧ್ಯ ಪ್ರದೇಶ , ತಮಿಳು ನಾಡು ಹಾಗು ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿದ್ದು, ಅವುಗಳು ಈ ಕೆಳಗಿನಂತಿದೆ.

ಬ್ಯಾಂಕ್ ಗೆ ವಂಚಿಸಿದ ಬಗ್ಗೆ ಉತ್ತರ ಪ್ರದೇಶ ರಾಜ್ಯದ ಸದಾರ್ ಬಜಾರ್ ಪೊಲೀಸ್ ಠಾಣೆ ಮೊ.ಸಂ: 310/1997 ಕಲಂ: 420, 467,468,471 ಭಾ.ದಂ.ಸಂ (ಸಿ.ಬಿ.ಐ ತನಿಖಾ ಸಂಸ್ಥೆಯಿಂದ ರೆಡ್ ಕಾರ್ನರ್ ನೊಟೀಸ್ ಸಂ: RC12(S)/98 )

ಚಕ್ ಬೌನ್ಸ್ ಪ್ರಕರಣಕ್ಕೆ ಸಂಬಂದಿಸಿದಂತೆ ಮತ್ತು ಮಹರಾಷ್ಟ್ರದ ಸಾವಂಗಿ ಪೊಲೀಸ್ ಠಾಣೆ ಮೊ.ಸಂ: 67/2017 ಕಲಂ: 420, 506ಜೊತೆಗೆ 34 ಭಾ.ದಂ.ಸಂ (ಈ ಪ್ರಕಣರಣಕ್ಕೆ ಸಂಬಂಧ ಪಟ್ಟಂತೆ ಪಿ ಸ್ಯಾಮ್ ಪೀಟರ್ ಗೆ ಉದ್ಘೋಷಣೆ ಇರುತ್ತದೆ.) Proclaimed Offender Of the state of Maharashtra)
ಕರ್ನಾಟಕದ ಕೊಡಗು ಜಿಲ್ಲೆಯ ಕುಶಾಲ ನಗರದಲ್ಲಿ ಕರ್ನಾಟಕ ಬ್ಯಾಂಕ್ ಗೆ ಮೋಸ ಮಾಡಿದ ಬಗ್ಗೆ ಕುಶಾಲನಗರ ಟೌನ್ ಪೊಲೀಸ್ ಠಾಣೆ ಮೊ.ಸಂ: 210/1998 ಕಲಂ: 420 ಜೊತೆಗೆ 34 ಭಾ.ದಂ.ಸಂ
ಕರ್ನಾಟಕದ ಕೊಡಗು ಜಿಲ್ಲೆಯ ಕುಶಾಲ ನಗರದಲ್ಲಿ ಚಿಕ್ಕಮಗಳೂರು ಗ್ರಾಮೀಣ ಬ್ಯಾಂಕ್ ಗೆ ಮೋಸ ಮಾಡಿದ ಬಗ್ಗೆ ಕುಶಾಲ ನಗರ ಟೌನ್ ಪೊಲೀಸ್ ಠಾಣೆ ಮೊ.ಸಂ: 221/1998 ಕಲಂ: 420 ಜೊತೆಗೆ 34 ಭಾ.ದಂ.ಸಂ
ಹಣ ವಂಚಸಿದ ಬಗ್ಗೆ ಚತ್ತಿಸ್ ಗಡ ರಾಜ್ಯದ ರಾಯ್ ಪುರ್ ಜಿಲ್ಲೆಯ ಕೈರಗಾಡ್ ಪೊಲೀಸ್ ಠಾಣೆ ಮೊ.ಸಂ 192/1997 ಕಲಂ: 420 ಭಾ.ದಂ.ಸಂ
ಹಣ ವಂಚಿಸಿದ ಬಗ್ಗೆ ಚತ್ತಿಸ್ ಗಡ್ ರಾಜ್ಯದ ರಾಯ್ ಪುರ್ ಜಿಲ್ಲೆಯ ಕೈರಗಾಡ್ ಪೊಲೀಸ್ ಠಾಣೆ ಮೊ.ಸಂ 49/1997 ಕಲಂ: 420 ಭಾ.ದಂ.ಸಂ
ಬಿಹಾರ ರಾಜ್ಯದ ಮುಜಾಫರ್ ನಗರದ ಪೊಲೀಸ್ ಠಾಣೆ ಮೊ.ಸಂ 180/1997 ಕಲಂ: 420 ಭಾ.ದಂ.ಸಂ
ಜಾರ್ಕಾಂಡ್ ರಾಜ್ಯದ ಲಾಲ್ ಪೂರ ಪೊಲೀಸ್ ಠಾಣೆ ಮೊ.ಸಂ 59/1999 ಕಲಂ: 406,379 ಭಾ.ದಂ.ಸಂ
ಮಧ್ಯ ಪ್ರದೇಶ ರಾಜ್ಯದ ಕಾಂಡವಾ ಪೊಲೀಸ್ ಠಾಣೆ ಮೊ.ಸಂ 04/1999 ಕಲಂ: 41 (1). 102 ಸಿ ಅರ್ ಪಿ.ಸಿ ಮತ್ತು ಕಲಂ: 420 ಭಾ.ದಂ.ಸಂ ದಸ್ತಗಿರಿ ಯಾಗಿ (ಪೊಲೀಸ್ ಠಾಣೆಯಿಂದ ಪರಾರಿಯಾದ ಪ್ರಕರಣ.) ತಮಿಳು ನಾಡ ರಾಜ್ಯದಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಸ್ತುತ ಸ್ಯಾಮ್ ಪೀಟರ್ ನು ಹಲವು ವರ್ಷಗಳಿಂದ ಕರ್ನಾಟಕದಲ್ಲಿದ್ದು, NCIB Director ಎಂದು ಜನರಿಗೆ ನಂಬಿಸಿ, ಹೆದರಿಸಿ, ತನ್ನ ಬಾಡಿಗಾರ್ಡ್ ಗಳೊಂದಿಗೆ ಅಪಹರಿಸಿ ಹಣ ವಸೂಲಿ ಮಾಡಿದ್ದು, ಅಲ್ಲದೇ ಹಲವಲರಲ್ಲಿ ಹಣ ತೆಗೆದುಕೊಂಡು ಮೋಸ ಮಾಡಿದ್ದು, ಈ ಬಗ್ಗೆ ಯಾರು ಎಲ್ಲಿಯೂ ಅವನ ವಿರುದ್ದ ದೂರು ನೀಡಿರಲಿಲ್ಲ. ಮಂಗಳೂರು ಕದ್ರಿ ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಯಾಮ್ ಪೀಟರ್ ನನ್ನು ಬಂಧಿಸಿದ ನಂತರ ಅವನ ವಿರುದ್ದ ಈ ಕೆಳಗಿನಂತೆ ಪ್ರಕರಣಗಳು ದಾಖಲಾಗಿರುತ್ತದೆ

ಮಂಗಳೂರು ಪೂರ್ವ ಪೊಲೀಸ್ ಠಾಣೆ ಮೊನಂ: 109/2019 ಕಲಂ: 170, 171, 419,120ಬಿ, 399. 402, ಜೊತೆಗೆ 149 ಭಾದಂಸಂ ಮತ್ತು ಕಲಂ: 3 ಮತ್ತು 25 ಶಸ್ತ್ರಾಸ್ತ ನಿಷೇಧ ಕಾಯ್ದೆ ಮತ್ತು ಕಲಂ: 7 ರಾಜ್ಯ ಲಾಂಛನ (ಅನುಚಿತ ಬಳಕೆಯ ನಿಷೇಧ) ಕಾಯ್ದೆ 2005
ರೈಸ್ ಪುಲ್ಲಿಂಗ್ ವಿಷಯಕ್ಕೆ ಸಂಬಂದಿಸಿದಂತೆ ರಿಯಾಜ್ ಎಂಬಾತನನ್ನು ಅಪಹರಿಸಿದ ವಿಷಯಕ್ಕೆ ಸಂಬಂದಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊ ನಂ: 144/2019 ಕಲಂ: 171, 323, 342, 384, 420, 365 ಬಾದಂಸಂಮತ್ತು ಕಲಂ: 3, 27 ಆರ್ಮ್ಸ್ ಆಕ್ಟ್
ಬೆಂಗಳೂರು ನಗರದ ಯಲಹಂಕದ ನ್ಯೂ ಟೌನ್ ಪೊಲೀಸ್ ಠಾಣೆ ಮೊ.ಸಂ: 147/2019 ಕಲಂ: 420, 419 ಭಾ.ದಂ.ಸಂ

ಈತನ ವಿಚಾರಣೆ ನಡೆಸಿದ ಸಮಯ ಈತನು ಬೆಂಗಳೂರಿನಲ್ಲಿ NCIB Director ಎಂದು ಜನರಲ್ಲಿ ನಂಬಿಸಿ ಈತನಿಗೆ ಬೆಂಗಳೂರಿನ ಮುಜಾಫರ್ ಎಂಬ ವಕೀಲ ನನ್ನು ಪರಿಚಯ ಮಾಡಿಕೊಂಡು ಆತನೊಂದಿಗೆ ಸೇರಿ ಕೊಂಡು ಸಂಚು ರೂಪಿಸಿ ಹಣ ತೆಗೆಸಿ ಕೊಡುವ ಪ್ಲಾನ್ ಮಾಡಿಕೊಂಡು Parallel Policing ತರಹ ಕೆಲಸ ಮಾಡಿಕೊಂಡು ಜನರಿಂದ ದೂರು ಪಡೆದು ತನಿಖೆ ಮಾಡುವುದಾಗಿ ಹೇಳಿ ಅವರಿಂದ ಹಣ ಪಡೆದು ನಂಬಿಸಿ ಮೋಸ ಮಾಡಿರುತ್ತಾನೆ.

ಈತನ ವಿಚಾರಣೆ ನಡೆಸಿದ ಸಮಯ ದುಬೈ ಶರೀಪ್ ಎಂಬಾತನ ಚಿನ್ನವನ್ನು ಬೆಂಗಳೂರು ಕಸ್ಟಮ್ ಅಧಿಕಾರಿಗಳು ಹಿಡಿದು ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಶರೀಪ್ ನು ಬೆಂಗಳೂರಿನ ವಕೀಲ ಮುಜಾಫರ್ ಅಹಮ್ಮದ್ ರವರಿಗೆ ತಿಳಿಸಿದಾಗ ವಕೀಲನು ಗಿರೀಶ್ ರೈ ಮತ್ತು ಇಮ್ತಿಯಾಜ್ ರವರನನ್ನು ಶರೀಪ್ ರವರಿಗೆ ಪರಿಚಯ ಮಾಡಿಸಿ ಕಸ್ಟಮ್ ಇಲಾಖೆಯಲ್ಲಿ ಕೇಸು ಆಗದಂತೆ ಇವರು ನೋಡಿ ಕೊಳ್ಳುತ್ತಾರೆ ಎಂದು ತಿಳಿಸಿ, ಮುಜಾಫರ್ ಅಹಮ್ಮದ್ ವಕೀಲರು ದುಬೈ ಶರೀಪ್ ನಿಂದ ಗಿರೀಶ್ ರೈ ಮತ್ತು ಇಮ್ತಿಯಾಜ್ ರವರಿಗೆ 1.7 ಕೋಟಿ ಹಣ ಕೊಡಿಸಿದ್ದು, ಆದರೇ ದುಬೈ ಶರೀಪ್ ನ ವಿರುದ್ದ ಕಸ್ಟಮ್ ಇಲಾಖೆಯಲ್ಲಿ ಕೇಸು ಆದ ಕಾರಣ ಶರೀಪ್ ರವರಿಗೆ ಕೇಸು ಅಗಿ 1.7 ಕೋಟಿ ನಷ್ಟ ಆಗಿದ್ದು, ಇದನ್ನು ಮುಜಾಫರ್ ವಕೀಲರ ಮುಖಾಂತರ ಹಣ ಕೊಟ್ಟ ಕಾರಣ ಶರೀಪ್ ನು ಹಣ ವಾಪಾಸು ಕೊಡುವಂತೆ ಮೂಝಾಪರ್ ವಕೀಲಗೆ ಬೆನ್ನು ಬಿದ್ದ ಕಾರಣ ಮುಜಾಪರ್ ವಕೀಲರು ಸ್ಯಾಮ್ ಪೀಟರ್ ನಿಗೆ ಮಂಗಳೂರಿಗೆ ಹೋಗಿ ಗಿರೀಶ್ ರೈ ಮತ್ತು ಇಮ್ತಿಯಾಜ್ ರವರನ್ನು ಅಪಹರಿಸಿ, ಹಣ ವಸೂಲಿ ಮಾಡಿ ಕೊಡುವಂತೆ ತಿಳಿಸಿ ಅದಕ್ಕಾಗಿ ಮಂಗಳೂರಿನಲ್ಲಿ ಅಬ್ದುಲ್ ಲತೀಪ್ ಮತ್ತು ಜಿ ಮೊಹಿದ್ದಿನ್ @ ಚೆರಿಯನ್ ರವರು ಸಹಾಯ ಮಾಡುತ್ತಾರೆಂದು ತಿಳಿಸಿ ಕಳುಹಿಸಿದ್ದು, ಈ ಬಗ್ಗೆ ಸ್ಯಾಮ್ ಪೀಟರ್ ನು ಮಂಗಳೂರು ಬಂದ ಸಮಯ ಲತೀಪ್ ಮತ್ತು ಜಿ ಮೊಹಿದ್ದಿನ್ @ ಚೇರಿಯನ್ ರವರು ಸ್ಯಾಮ್ ಪೀಟರ್ ಗೆ ಸಹಕರಿಸಿರುತ್ತಾರೆ.
ಅಬ್ದುಲ್ ಲತೀಪ್ ಮತ್ತು ಜಿ ಮೊಹಿದ್ದಿನ್ ಚೇರಿಯನ್ ರವರು ಸ್ಯಾಮ್ ಪೀಟರ್ ನು ಮಂಗಳೂರಿನಲ್ಲಿ ಉಳಿದು ಕೊಳ್ಳಲು ಸಹಕರಿಸಿ ಆತನೊಂದಿಗೆ ಕೃತ್ಯಕ್ಕೆ ಸಂಚು ರೂಪಿಸಿ ಗಿರೀಶ್ ರೈ ಮತ್ತು ಇಮ್ತಿಯಾಜ್ ರವರಿಂದ ಹಣ ವಸೂಲಿ ಮಾಡಿದ ನಂತರ ಬಂದ ಹಣದಲ್ಲಿ ಇಷ್ಟು ಪರ್ಸೆಂಟೆಜ್ ಹಣವನ್ನು ನೀಡ ಬೇಕೆಂದು ಮಾತುಕತೆ ಮಾಡಿರುತ್ತಾರೆ.
ವಕೀಲ ಮುಜಾಫರನು ಸ್ಯಾಮ್ ಪೀಟರ್ ನಿಗೆ ಆತನ ಹೆಸರಿಲ್ಲಿ ಸಿಮ್ ಕಾರ್ಡ್ ತೆಗೆದು ಕೊಳ್ಳದಂತೆ, ವಾಹನಕ್ಕೆ ಯಾವುದೇ ರೀತಿ ನೊಂದಾಣಿ ಸಂಖ್ಯೆ ಹಾಕದಂತೆ, ಹಾಗು ತನ್ನ ಮೊಬೈಲ್ ನಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳಾದ ಎಸಿಪಿ , ಡಿಸಿಪಿಯವರ ಹೆಸರನ್ನು ತನ್ನ ಮೊಬೈಲ್ ನಲ್ಲಿ ಸೇವ್ ಮಾಡುವಂತೆ ಐಡಿಯಾ ನೀಡಿರುತ್ತಾನೆ. ಮತ್ತು ಮುಂದೆ ಏನಾದರೂ ಸಮಸ್ಯೆಯಾದರೆ ತೊಂದರೆಯಾಗದಂತೆ ಉಪಾಯಗಳನ್ನು ಸ್ಯಾಮ್ ಪೀಟರ್ ನಿಗೆ ನೀಡುತ್ತಿದ್ದನು.
ಸ್ಯಾಮ್ ಪೀಟರ್ ನು ಒಬ್ಬನಕಲಿ ಅಧಿಕಾರಿ ಎಂದು ಮುಝಾಪರ್ ವಕೀಲನಿಗೆ ಗೊತ್ತಿದ್ದರೂ ಕೂಡ ಅವನಿಂದ ಅಪಹರಿಸಿ ಹಣ ವಸೂಲಿ ಮಾಡುವ ಕೃತ್ಯಕ್ಕೆ ಸಹಕರಿಸಿರುತ್ತಾನೆ.
ಅಲ್ಲದೇ ಸ್ಯಾಮ್ ಪೀಟರ್ ನಿಗೆ ಉಡುಪಿಯ ರಾಮಚಂದ್ರ ನಾಯಕ್ ರವರು ಕೇರಳದ ರಾಘವೇಂದ್ರ ಸ್ವಾಮೀಜಿಯವರ ಮಠದ ವಿವಾದವನ್ನು ಇತ್ಯರ್ಥ ಪಡಿಸುವಂತೆ ತಿಳಿಸಿ ಹಣ ಕೊಟ್ಟಿದ್ದು ಅಲ್ಲದೇ ಕೇರಳದ ರಾಘವೇಂದ್ರ ಸ್ವಾಮೀಜಿಯವರು ದೂರು ಅರ್ಜಿಯನ್ನು ಸ್ಯಾಮ್ ಪೀಟರ್ ನಿಗೆ ನೀಡಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಸ್ವಾಮೀಜಿಯವರ ಎದ್ರಿ ದಾರರನ್ನು ವಿಚಾರಿಸಲು/ ಹೆದರಿಸಲು/ ಅಪಹರಿಸಲು ಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಸ್ಯಾಮ್ ಪಿಟರ್ ನ ಈ ಕೃತ್ಯಕ್ಕೆ ಸ್ಥಳೀಯ ಮಂಗಳೂರಿನವರಾದ ಅಬ್ದುಲ್ ಲತೀಪ್ ಮತ್ತು ಜಿ ಮೊಹಿದ್ದಿನ್ @ ಚೇರಿಯನ್ ರವರು ಸಹಾಯ ಮಾಡಿರುತ್ತಾರೆ.
ತನಿಖೆ ನಡೆಸಿದ ಸಮಯ ಆರೋಪಿಗಳಾದ ಸ್ಯಾಮ್ ಪೀಟರ್, ಅಬ್ದುಲ್ ಲತೀಪ್ ಮತ್ತು ಜಿ ಮೊಹಿದ್ದಿನ್ @ ಚೇರಿಯನ್ ರವರ ಮನೆಯನ್ನು ಮಾನ್ಯನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಸರ್ಚ್ ಮಾಡಿದಾಗ ಆರೋಪಿ ಜಿ ಮೊಹಿದ್ದಿನ್ @ ಚೇರಿಯನ್ ರವರ ಮನೆಯಲ್ಲಿ ತಲವಾರು ಪತ್ತೆಯಾಗಿರುತ್ತದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಮೊ ನಂ: 100/2019 ಆರ್ಮ್ಸ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
ರೈಸ್ ಪುಲ್ಲಿಂಗ್ ಕೇಸ್ ನಲ್ಲಿ ಸ್ಯಾಮ್ ಪೀಟರ್ ನು ಚಿಕ್ಕಬಳ್ಳಾಪುರದ ರಿಯಾಜ್ ಎಂಬಾತನನ್ನು ಅಪಹರಿಸಿ ಆತನಿಂದ ರೈಸ್ ಪುಲ್ಲಿಂಗ್ ನಲ್ಲಿ ಕೊಟ್ಟ ಹಣ ವಾಪಾಸು ನೀಡುವ ಬಗ್ಗೆ ರಿಯಾಜ್ ನ ಸಿಲೆರಿಯಾ ಕಾರನ್ನು ತನ್ನ ಹೆಸರಿಗೆ ಹೆದರಿಸಿ ಬರೆಸಿ ಕೊಂಡು ಕಾರನ್ನು ಕೊಂಡು ಹೋಗಿದ್ದು, ಈ ಸಿಲೇರಿಯಾ ಕಾರನ್ನು ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಸ್ಯಾಮ್ ಪೀಟರ್ ನು ಇತರರಿಗೆ ಪೋನ್ ಮಾಡಿ ಹೆದರಿಸಿದಾಗ ತನ್ನ ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು ಮತ್ತು ಯಾವುದೇ ಸಿಮ್ ಕಾರ್ಡ್ ನ್ನು ತನ್ನ ಹೆಸರಿನಲ್ಲಿ ಪಡೆದುಕೊಂಡಿರುವುದಿಲ್ಲ ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿರುತ್ತದೆ.
ಸ್ಯಾಮ್ ಪೀಟರ್ ನು ಬಳಸುವ ಎಲ್ಲಾ ಸಿಮ್ ಗಳು ಬೇರೆಯವರ ಹೆಸರಿನಲ್ಲಿ ಪಡೆದು ಕೊಂಡಿರುವುದಾಗಿದೆ.
ಸ್ಯಾಮ್ ಪೀಟರ್ ನು ಜನರನ್ನು ನಂಬಿಸಲು ತಾನೆ ತನ್ನ ಮೊಬೈಲ್ ನಲ್ಲಿ ACP Bangalore ಎಂದು ಹೆಸರು ಸೇವ್ ಮಾಡಿದ್ದು, ಅದಕ್ಕೆ ಮೇಸೆಜ್ ಗಳನ್ನು ಕಳುಹಿಸಿ ಜನರಿಗೆ ತೋರಿಸಿ ತಾನು ಪೊಲೀಸ್ ಅಧಿಕಾರಿಯವರ ಸಂಪರ್ಕ ದಲ್ಲಿರುವುದಾಗಿ ನಂಬಿಸುತ್ತಿದ್ದನು.
ಸ್ಯಾಮ್ ಪೀಟರ್ ನು ತನ್ನ NCIB ಸಂಸ್ಥೆ ಮೋಸ ಮಾಡಿದವರನ್ನು ಪತ್ತೆ ಮಾಡಿರುವುದಾಗಿ ನ್ಯೂಸ್ ಕವರೇಜ್ ವಿಡೀಯೋ ಮಾಡಿ ವಿಡೀಯೋವನ್ನು ತನ್ನ ಮೊಬೈಲ್ ನಲ್ಲಿಟ್ಟು ಕೊಂಡು ಅದನ್ನು ಬೇರೆ ಬೇರೆ ವ್ಯಕ್ತಿಗಳಿಗೆ ತಾನು ಅಪರಾಧವನ್ನು ಪತ್ತೆ ಮಾಡಿರುವುದಾಗಿ ತೋರಿಸಿ ಜನರನ್ನು ನಂಬಿಸುತ್ತಿದ್ದನು.
ತಾನು NCIB Director ಎಂದು ಹೇಳಿಕೊಂಡು ಗಣ್ಯರೊಂದಿಗೆ, ರಾಜಕೀಯ ವ್ಯಕ್ತಿಗಳೊಂದಿಗೆ ಪೋಟೋ ತೆಗೆಸಿ ಕೊಂಡು ಅದನ್ನು ಜನರಿಗೆ ತೋರಿಸಿ ತನ್ನ ಕೆಲಸವನ್ನು ಮಾಡಿ ಕೊಳ್ಳುತ್ತಿದ್ದನು.
ಸ್ಯಾಮ್ ಪೀಟರ್ ನು ತಾನು NCIB Director ಎಂದು ಹೇಳಿ ಎಲ್ಲಾ ಕಡೆ ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿದ್ದನು.
ಸ್ಯಾಮ್ ಪೀಟರನು ಉಡುಪಿಯ ನಿಖಿಲ್ , ಅಬೂಬಕ್ಕರ್ ಮತ್ತು ಮಂಗಳೂರು ನಗರ ತಲಪಾಡಿಯ ಸಿದ್ದಿಕ್ ರವರಿಗೆ ತಾನು NCIB Director ಎಂದು ಹೇಳಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸಿರುತ್ತಾನೆ ಈ ಬಗ್ಗೆ ಪ್ರಕರಣ ದಾಖಲಿಸುವಂತೆ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ತಿಳಿಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ರೈಸ್ ಪುಲ್ಲಿಂಗ್ ವಿಷಯಕ್ಕೆ ಸಂಬಂದಿಸಿದಂತೆ ರಿಯಾಜ್ ಎಂಬಾತನನ್ನು ಅಪಹರಿಸಿ ಹಣ ವಸೂಲಿ ಮಾಡಿದ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊ ನಂ: 144/2019 ಕಲಂ: 171, 323, 342, 384, 420, 365 ಬಾದಂಸಂಮತ್ತು ಕಲಂ: 3, 27 ಆರ್ಮ್ಸ್ ಆಕ್ಟ್ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಸ್ಯಾಮ್ ಪೀಟರ್ ಗೆ ಮಾಡಲು ಸ್ಯಾಮ್ ಪೀಟರ್ ಗೆ ಸಹಾಯ ಮಾಡಿದ ನಿಖಿಲ್, ಅಬೂಬಕ್ಕರ್ , ಬಾರತಿ ರವರನ್ನು ದಿಬ್ಬೂರಹಳ್ಳಿ ಪೊಲೀಸ್ ರವರು ವಶಕ್ಕೆ ಪಡೆದಿರುತ್ತಾರೆ.
ಸ್ಯಾಮ್ ಪೀಟರ್ ನಿಗೆ ಬೆಂಗಳೂರಿನ ವಕೀಲ ಮುಜಾಫರ್ ಅಹಮ್ಮದ್ ಮತ್ತು ಉಡುಪಿಯ ರಾಮಚಂದ್ರ ನಾಯಕ್ ರವರು ಕೃತ್ಯಕ್ಕೆ ಸಹಕಾರ ನೀಡಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.
ಸ್ಯಾಮ್ ಪೀಟರ್ ನನ್ನು ವಿಚಾರಣೆ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಆ ನಂತರ ಸಂಬಂಧ ಪಟ್ಟ ತನಿಖಾ ಏಜನ್ಸಿ ಮತ್ತು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಯಾಮ್ ಪೀಟರ್ ನ ವಿರುದ್ದ ಬಾಡಿ ವಾರಂಟ್ ಹೊರಡಿಸಿ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ.

ಈತನ ವಿರುದ್ದ ಕರ್ನಾಟಕ ರಾಜ್ಯ ಮತ್ತು ದೇಶದ ಇತರ ರಾಜ್ಯಗಳಲ್ಲಿ ಈ ವರೆಗೂ ಒಟ್ಟು 14 ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿರುತ್ತದೆ. ಇನ್ನು ಹೆಚ್ಚು ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ.


Spread the love