ಸಿಸಿಬಿ ಕಾರ್ಯಾಚರಣೆ: ಹೈಟೆಕ್ ವೇಶ್ಯಾವಾಟಿಕೆ ಜಾಲ ಪತ್ತೆ – ಇಬ್ಬರ ಬಂಧನ

Spread the love

ಸಿಸಿಬಿ ಕಾರ್ಯಾಚರಣೆ: ಹೈಟೆಕ್ ವೇಶ್ಯಾವಾಟಿಕೆ ಜಾಲ ಪತ್ತೆ – ಇಬ್ಬರ ಬಂಧನ

ಮಂಗಳೂರು : ಮಂಗಳೂರು ನಗರದಲ್ಲಿ ಇಂಟರ್ ನೆಟ್ ವೆಬ್ ಸೈಟ್ ಮೂಲಕ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಬೃಹತ್ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ, ಈ ದಂಧೆಯನ್ನು ನಡೆಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಉಡುಪಿ ಜಿಲ್ಲೆ ಪಡುಪಲಿಮಾರು ನಿವಾಸಿ ಜೀವನ್ ಪೂಜಾರಿ (27) ಹಾಗೂ ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ನಿವಾಸಿ ಕೆ.ಪಿ. ನಾಗರಜ್ (27) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದಲ್ಲಿ http: mangalore.locanto.net ಎಂಬ ವೆಬ್ ಸೈಟ್ ನಲ್ಲಿ ಇಂಟರ್ ನೆಟ್ ಮೂಲಕ ವೇಶ್ಯಾವಾಟಿಕೆಗಾಗಿ ಗ್ರಾಹಕರಿಗೆ ಯುವತಿಯರನ್ನು ಒದಗಿಸಿ ವ್ಯವಹಾರ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಈ ದಿನ ದಿನಾಂಕ: 22-06-2018 ರಂದು ಮಂಗಳೂರು ನಗರದ ಬಿಜೈ ಕಾಫಿಕಾಡ್ ರಸ್ತೆಯ ಕೊಟ್ಟಾರ ಕ್ರಾಸ್ ಬಳಿಯ ಆಪಾರ್ಟ್ ಮೆಂಟ್ ನ ಪ್ಲಾಟ್ ವೊಂದಕ್ಕೆ ದಾಳಿ ಮಾಡಿ ಆರೋಪಿಗಳಾದ ಜೀವನ್ ಪೂಜಾರಿ ಮತ್ತು ಕೆಪಿ ನಾಗರಾಜ್ ಅವರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಆರೋಪಿಗಳು ಈ ಹೈಟೆಕ್ ವೇಶ್ಯಾವಾಟಿಕೆ ಧಂಧೆಯನ್ನು ನಡೆಸಲು ಇಂಟರ್ ನೆಟ್ ನಲ್ಲಿ http: mangalore.locanto.net ಎಂಬ ಹೆಸರಿನಲ್ಲಿ ವೆಬ್ ಸೈಟ್ ನಲ್ಲಿ ಇವರ ಮೊಬೈಲ್ ನಂಬ್ರಗಳನ್ನು ನಮೂದಿಸಿ ಈ ಮೊಬೈಲ್ ನಂಬ್ರಗಳಿಗೆ ಕರೆ ಮಾಡಿದ ಗ್ರಾಹಕರನ್ನು ಫ್ಲಾಟ್ ಗೆ ಕರೆದುಕೊಂಡು ಬಂದು ಯುವತಿಯರನ್ನು ವೇಶ್ಯಾವಾಟಿಕೆಗಾಗಿ ನೀಡುತ್ತಿದ್ದರು.. ವಶಕ್ಕೆ ಪಡೆದುಕೊಂಡ ಇಬ್ಬರು ನೊಂದ ಯುವತಿಯರನ್ನು ಮಹಿಳಾ ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಗಿರುತ್ತದೆ. ಆರೋಪಿಗಳ ವಶದಿಂದ 2 ಮೊಬೈಲ್ ಫೋನ್ ಗಳನ್ನು ಹಾಗೂ ನಗದು ರೂ. 30,220/- ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತಿನ ಆಂದಾಜು ಒಟ್ಟು ಮೌಲ್ಯ ರೂ. 1,26,295/- ಆಗಿರುತ್ತದೆ.. ಈ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿರುವ ಇಬ್ಬರು ಪಿಂಪ್ ಗಳು ತಲೆಮರೆಸಿಕೊಂಡಿರುತ್ತಾರೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐಯವರಾದ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಮತ್ತು ಉರ್ವಾ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ರವೀಶ್ ನಾಯಕ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love