ಸೀಲ್ ಡೌನ್ ಉಲ್ಲಂಘಿಸಿದ ಮಂಗಳೂರಿನ ಶಾಸಕರು , ಹೋಂ ಕ್ವಾರಂಟೈನ್ ಗೆ  ಕಾಂಗ್ರೆಸ್ ಆಗ್ರಹ

Spread the love

ಸೀಲ್ ಡೌನ್ ಉಲ್ಲಂಘಿಸಿದ ಮಂಗಳೂರಿನ ಶಾಸಕರು , ಹೋಂ ಕ್ವಾರಂಟೈನ್ ಗೆ  ಕಾಂಗ್ರೆಸ್ ಆಗ್ರಹ

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ರವರು ತಮ್ಮ ಬೆಂಬಲಿಗರೊಂದಿಗೆ ತಿರುಗಾಡಿ ತನ್ನ ಸರಕಾರವೇ ರೂಪಿಸಿದಂತಹಾ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಅವರು ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಒಳಗಾಗಬೇಕು. ಇಲ್ಲದೇ ಹೋದರೆ ಜಿಲ್ಲಾಡಳಿತವು ಅವರು ಉಲ್ಲಂಘನೆ ಮಾಡಿದ ವಿವರವನ್ನು ಸರಕಾರಕ್ಕೆ ಸಲ್ಲಿಸಬೇಕು. ಸರಕಾರವು ಈ ಕೂಡಲೇ ಶಾಸಕರಿಗೆ ಹೋಂ ಕ್ವಾರಂಟೈನ್ಗೆ ಒಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಪಿ ವಿ ಮೋಹನ್ ಆಗ್ರಹಿಸಿದ್ದಾರೆ.

ನಮ್ಮ ನೆರೆ ಹೊರೆಯ ಉಡುಪಿ, ಕೊಡಗು, ಚಿಕ್ಕಮಗಳೂರು ,ಶಿವಮೊಗ್ಗ ಜಿಲ್ಲೆಗಳ ತರಹ ನಾವು ಇಂದು ಹಸಿರು ವಲಯದಲ್ಲಿ ಇರಬೇಕಾಗಿದ್ದು ನಮ್ಮ ಜಿಲ್ಲೆಯ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಬೇಕಾದಂತಹಾ ನೆಲೆಯಲ್ಲಿರಬೇಕಾಗಿತ್ತು. ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಸದೃಢಗೊಳಿಸುವ ಸನ್ನಿವೇಶದಲ್ಲಿರಬೇಕಾಗಿತ್ತು. ಬೇಜವಾಬ್ದಾರಿ, ಉದಾಸೀನತೆ, ಹೊಣೆಗೇಡಿತನದ ನಾಯಕತ್ವದಿಂದ ಮೂರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಆಡಳಿತ ಪಕ್ಷವು ಕೇವಲ ಚಿಲ್ಲರೆ ರಾಜಕೀಯವನ್ನು ಮಾಡುತ್ತಿದೆ. ಬೆಳ್ತಂಗಡಿ , ಮಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಉಳ್ಳಾಲ ಕ್ಷೇತ್ರಕ್ಕೆ ಹೋಗಿ ಅಕ್ಕಿ ವಿತರಣೆ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾದರಿ ರಾಜಕೀಯ ಮಾಡುವ ಬದಲು ಇದೀಗ ಬೇಲಿಯೇ ಎದ್ದು ಹೊಲ ಮೇಯುವ ರೀತಿಯ ರಾಜಕೀಯವನ್ನು ಕಾಣುತ್ತಿದ್ದೇವೆ. ನಿನ್ನೆ ಸೀಲ್ ಡೌನ್ ಆದಂತಹಾ ಬೋಳೂರು ಪ್ರದೇಶದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ರವರು ತಮ್ಮ ಬೆಂಬಲಿಗರೊಂದಿಗೆ ತಿರುಗಾಡಿ ತನ್ನ ಸರಕಾರವೇ ರೂಪಿಸಿದಂತಹಾ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಅವರು ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಒಳಗಾಗಬೇಕು. ಇಲ್ಲದೇ ಹೋದರೆ ಜಿಲ್ಲಾಡಳಿತವು ಅವರು ಉಲ್ಲಂಘನೆ ಮಾಡಿದ ವಿವರವನ್ನು ಸರಕಾರಕ್ಕೆ ಸಲ್ಲಿಸಬೇಕು. ಸರಕಾರವು ಈ ಕೂಡಲೇ ಶಾಸಕರಿಗೆ ಹೋಂ ಕ್ವಾರಂಟೈನ್ಗೆ ಒಳಪಡಿಸಬೇಕು ಈ ಮೂಲಕ ಕಾಂಗ್ರೆಸ್ ಪಕ್ಷವು ಆಗ್ರಹಪಡಿಸುತ್ತಿದೆ. ಅವರ ಜೊತೆಗೆ ಬಂದಿರ ತಕ್ಕಂತ ಸ್ಥಳೀಯ ನಗರ ಪಾಲಿಕಾ ಸದಸ್ಯ ಮತ್ತು ಇತರ 8 ಮಂದಿ ಸದಸ್ಯರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಬೇಕು. ರಾಜ್ಯದ ಕೆಲ ಸಚಿವರೂ ಕೂಡಾ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ, ಕೆಲವು ರಾಜ್ಯಗಳಲ್ಲಿ ಡಿ.ಸಿ ಗಳು, ಪೋಲೀಸ್ ಅಧಿಕಾರಿಗಳು , ಉನ್ನತ ಅಧಿಕಾರಿಗಳು ಸೀಲ್ ಡೌನ್ ಪ್ರದೇಶಕ್ಕೆ ಹೋಗದೇ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಇಷ್ಟಿದ್ದೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಸೀಲ್ ಡೌನ್ ಪ್ರದೇಶಕ್ಕೆ ತೆರಳಿರುವುದು ಎಷ್ಟು ಸರಿ..? ಅವರು ಖಂಡಿತವಾಗಿಯೂ ಹೋಂ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತಿದೆ.

ಕಂಟೈನ್ಮೆಟ್ ಪ್ರದೇಶದ ಸೀಲ್ ಡೌನ್ ಮಾಡಿದಂತಹಾ 100 ಮೀ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ಜನರ ಓಡಾಟಗಳಾಗಲಿ ಅಗತ್ಯ ವಸ್ತುಗಳ ಸರಬರಾಜು ಆಗಲೀ ಎಲ್ಲವೂ 28 ದಿನಗಳ ಕಾಲ ನಿಷೇಧಿಸಲಾಗುತ್ತದೆ. ಯಾವುದೇ ರೀತಿಯ ಪಾಸ್ ಹೊಂದಿದವರಾಗಲೀ . ಪತ್ರಕರ್ತರೂ ಕೂಡಾ ಆ ಪ್ರದೇಶಕ್ಕೆ ಪ್ರವೇಶಿಸುವಂತಿಲ್ಲ. ಖಾಸಗೀ ವಾಹನಗಳೂ ಕೂಡಾ ಸಂಚರಿಸುವಂತಿಲ್ಲ. ಸೂಚನೆ ಹೊಂದಿದ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆ ಯರಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುತ್ತದೆ. ಸರಕಾರಕ್ಕೆ ಕಳಕಳಿ ಏನೆಂದರೆ ಹಾಟ್ಸ್ಪಾಟ್ ಎಂದು ಗುರುತಿಸಲ್ಪಟ್ಟ , ಸೀಲ್ ಡೌನ್ ಮಾಡಿದ ಪ್ರದೇಶದಿಂದ ರೋಗಗಳು ಹರಡಬಾರದು , ರೋಗಗಳನ್ನು ಅಲ್ಲಿಯೇ ತಡೆಹಿಡಿಯಬೇಕು . ಎರಡು ದಿನಗಳ ಹಿಂದೆಯಷ್ಟೇ ಸೀಲ್ ಡೌನ್ ಮಾಡಿದ ಬೋಳೂರು ಪ್ರದೇಶದಲ್ಲಿ ಶಾಸಕರಿಗೆ ಹೋಗುವಂತಹಾ ಔಚಿತ್ಯವೇನು..? ಅವರ ಸರಕಾರ ನೀಡಿದಂತಹಾ ಆದೇಶವನ್ನು ಉಲ್ಲಂಘನೆ ಮಾಡುವ ಮರ್ಮವೇನು..? ನಾವು ಸೋಂಕು ಹರಡುವಿಕೆಯನ್ನು ತಡೆಹಿಡಿಯುವ ಬದಲು ನಾವೇ ಸೋಂಕು ಹರಡುವಿಕೆಯನ್ನು ಸಹಕರಿಸುತ್ತಿದ್ದೇವೆನೋ ಎಂದು ಭಾಸವಾಗುತ್ತಿದೆ. ಇದು ನಮ್ಮ ಜಿಲ್ಲೆಯ ನಾಯಕತ್ವದ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love