Spread the love
ಸುಟ್ಟು, ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆ – ಆತ್ಮಹತ್ಯೆ ಶಂಕೆ
ಮಂಗಳೂರು: ಮನೆಯೊಳಗೆ ದಂಪತಿಗಳಿಬ್ಬರ ಶವಗಳು ಸುಟ್ಟು, ಕೊಳೆತ ರೀತಿಯಲ್ಲಿ ನಗರದ ತೊಕ್ಕೊಟ್ಟು, ಚೆಂಬುಗುಡ್ಡೆಯಲ್ಲಿ ಬುಧವಾರ ಪತ್ತೆಯಾಗಿವೆ.
ಮೃತರನ್ನು ತೊಕ್ಕೊಟ್ಟು,ಚೆಂಬುಗುಡ್ಡೆ ದಂಪತಿಗಳಾದ ಪದ್ಮನಾಭ (78) ವಿಮಲ (65) ಎಂದು ಗುರುತಿಸಲಾಗಿದೆ.
ಎರಡು ದೇಹಗಳು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿದ್ದು, ಕೊಳೆತು ಹೋಗಿದ್ದು, ಹಲವಾರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಉಳ್ಳಾಲ ಪಿಐ ಗೋಪಿಕೃಷ್ಣ,ಪಿಎಸ್ ಐ ಗುರುಕಾಂತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Spread the love