ಸುರತ್ಕಲ್: ಯುವತಿಗೆ ಕಿರುಕುಳ ಪ್ರಕರಣ: ಆರೋಪಿ ಬಂಧನ

Spread the love

ಸುರತ್ಕಲ್: ಯುವತಿಗೆ ಕಿರುಕುಳ ಪ್ರಕರಣ: ಆರೋಪಿ ಬಂಧನ

ಸುರತ್ಕಲ್: ಯುವತಿಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಇಡ್ಯಾ ನಿವಾಸಿ ಶಾರಿಕ್ ಎಂದು ತಿಳಿದು ಬಂದಿದೆ.

ಈತ ಯುವತಿಯ ಫೇಸ್ ಬುಕ್ ಹ್ಯಾಕ್ ಮಾಡಿ ಆಕೆಯ ಅಣ್ಣ ಮತ್ತೂ ಆತನ ಸ್ನೇಹಿತನಿಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶವನ್ನು ರವಾನಿಸಿಸಿದ್ದ ಎನ್ನಲಾಗಿದ್ದು, ಈ ಸಂಬಂಧ ಯುವತಿ ಅ.22ರಂದು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಳು.

ದೂರು ಆಧರಿಸಿ ಯುವಕನನ್ನು ಠಾಣೆಗೆ ಕರೆಸಿದ್ದ ಪೊಲೀಸರು ವಿಚಾರಣೆ ನಡೆಸಿ ಅ.23ರಂದು ಕಳುಹಿಸಿದ್ದರು. ಆ ಬಳಿಕ ಮತ್ತೆ ಅದೇ ರೀತಿಯ ಸಂದೇಶಗಳು ಬರಲಾರಂಭಿಸಿದವು. ಇದರಿಂದ ಆತಂಕಕ್ಕೀಡಾದ ಯುವತಿ ಆತ್ಮಹತ್ಯೆಗೆ ಯತ್ನಿಸಿ ದ್ದಳು ಎನ್ನಲಾಗಿದ್ದು, ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆಕೆ ಚೆತರಿಸಿಕೊಂಡಿದ್ದಾಳೆ.

ಈ ಹಿನ್ನೆಲೆಯಲ್ಲಿ ಆರೋಪಿ ಶಾರಿಕ್ ನ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments