ಸುಳ್ಯ ಮಂಜುನಾಥ ಭಟ್ ಕೊಲೆ ಪ್ರಕರಣ – ಒರ್ವನ ಬಂಧನ

Spread the love

ಸುಳ್ಯ ಮಂಜುನಾಥ ಭಟ್ ಕೊಲೆ ಪ್ರಕರಣ – ಒರ್ವನ ಬಂಧನ

ಸುಳ್ಯ: ಸುಳ್ಯದ ಮಂಜುನಾಥ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಐಬಿ ಹಾಗೂ ಸುಳ್ಯ ಪೋಲಿಸರು ಯುವಕನೋರ್ವನ್ನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಸುಳ್ಯ ನಿವಾಸಿ ಆಶಿತ್ (20) ಎಂದು ಗುರುತಿಸಲಾಗಿದೆ.

ಸುಬ್ರಹ್ಮಣ್ಯ ಕೆ 58ವರ್ಷ ಇವರ ಹೆಂಡತಿ2007 ರಲ್ಲಿ ಬಿಟ್ಟು ಹೋದ ನಂತರ ಒಬ್ಬಂಟಿಗರಾಗಿ ಕೃಷಿ ಮೂಲದಿಂದ ಬಂದ ಆದಾಯದಲ್ಲಿನ ಹಣದಲ್ಲಿ ವ್ಯವಹಾರ ಮಾಡುತ್ತಾ ಪಂಬೆತ್ತಾಡಿ ಗ್ರಾಮದಲ್ಲಿನ ತನ್ನ ನಿವಾಸದಲ್ಲಿ ಒಬ್ಬರೇ ವಾಸಿಸುತ್ತಿದ್ದು ಸಪ್ಟೆಂಬರ್ 7 ರಂದು ರಾಮಚಂದ್ರ ಕಲ್ಚಾರು ಎಂಬುವವರು ಪಿರ್ಯಾದುದಾರರಿಗೆ ದೂರವಾಣಿ ಕರೆ ಮಾಡಿ ನಿಮ್ಮ ಸಹೋದರ ಸುಮಾರು 10 ದಿನಗಳಿಂದ ಕಾಣುತ್ತಿಲ್ಲವೆಂದು ತಿಳಿಸಿದಾಗ ಸದರಿಯವರಿಗೆ ಮನೆಯ ಬಳಿ ಹೋಗಿ ನೋಡುವಂತೆ ತಿಳಿಸಿದ್ದು ನಂತರ ಅವರು ಮನೆಯ ಪರಿಸರಕ್ಕೆ ಹೋದಾಗ ದುರ್ವಾಸನೆ ಮನೆಯ ಒಳಗಿಂದ ಬರುತ್ತಿರುವುದಾಗಿ ದೂರವಾಣಿ ಮುಖಾಂತರ ತಿಳಿಸಿದ್ದು ನಂತರ ಪಿರ್ಯಾದುದಾರರು ಅವರ ಸಹೋದರ ಕುಟುಂಬಸ್ಥರಿಗೆ ತಿಳಿಸಿ ಸಪ್ಟೆಂಬರ್ 8ರಂದು ಬೆಳಿಗ್ಗೆ ತಮ್ಮ ನೆರೆಕೆರೆಯವರ ಸಹಾಯದಿಂದ ಗೋಡೆಯ ಮೇಲಿನಿಂದ ಒಳಹೋಗಿ ರೂಮಿನ ಬಾಗಿಲು ಒಡೆದು ನೋಡಲಾಗಿ ಅಣ್ಣ ಸುಬ್ರಹ್ಮಣ್ಯರನ್ನು ಯಾರೋ ದುಷ್ಕರ್ಮಿಗಳು ಹಣಕ್ಕಾಗಿಯೋ ಅಥವಾ ಇನ್ಯಾವುದೋ ಉದ್ದೇಶದಿಂದ ಕೊಲೆಮಾಡಿ ರೂಮಿನೊಳಗೆ ಹಾಕಿದ್ದು ಕೊಳೆತ ಸ್ಥಿತಿಯಲ್ಲಿದ್ದು ಹಂತಕರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೇಂದು ದೂರು ನೀಡಿದ್ದು ನಂತರ ತನಿಖಾ ಸಮಯದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಕ್ಕಳ ಪಂಬೆತ್ತಾಡಿ ಸುಬ್ರಹ್ಮಣ್ಯ ಭಟ್ ಕೊಲೆ ಪ್ರಕರಣ ಭೇದಿಸಿದ ಸುಳ್ಯ ವೃತ್ತ ನಿರೀಕ್ಷಕರ ತಂಡ ಮತ್ತು ಡಿಸಿಐಬಿ ತಂಡ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಸುಬ್ರಹ್ಮಣ್ಯ ಭಟ್ ರವರ ಕೊಲೆ ಪ್ರಕರಣ ಯಾವುದೇ ಸುಳಿವು ಇಲ್ಲದೆ ಕ್ಲಿಷ್ಟಕರವಾದ ಪ್ರಕರಣವಾಗಿದ್ದು ಈ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಅಧೀಕ್ಷಕರು ದಕ ಜಿಲ್ಲೆರವರು ಸುಳ್ಯ ವೃತ್ತ ನಿರೀಕ್ಷಕರ ಮತ್ತು ಡಿಸಿಐಬಿ ಪೊಲೀಸ್ ನಿರೀಕ್ಷಕರ ರವರ 2 ವಿಶೇಷ ತಂಡಗಳನ್ನು ರಚಿಸಿದ್ದು ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಕೊಲೆ ಪ್ರಕರಣದ ಆರೋಪಿಗಳ ಪತ್ತೆಯ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|ರವಿಕಾಂತೇಗೌಡ ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಜಿತ್ ವಿ,ಜೆ ರವರ ನಿರ್ದೇಶನದಂತೆ ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಶ್ರೀ ಶ್ರೀನಿವಾಸ್ ರವರ ನೇತೃತ್ವದಲ್ಲಿ ಸುಳ್ಯ ವೃತ್ತ ನಿರೀಕ್ಷಕರಾದ ಶ್ರೀ ಸತೀಶ್ ಕುಮಾರ್, ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಶ್ರೀ ಸುನೀಲ್ ವೈ ನಾಯಕ್, ಬೆಳ್ಳಾರೆ ಪಿಎಸ್ಐ ಈರಯ್ಯ, ಸುಬ್ರಹ್ಮಣ್ಯ ಪಿಎಸ್ಐ ಗೋಪಾಲ್, ಸುಳ್ಯ ಪಿಎಸ್ಐ ಮಂಜುನಾಥ್, ಮಾಧವ ಕೂಡ್ಲು ಮತ್ತು ಸಿಬ್ಬಂದಿಗಳಾದ Asi ಭಾಸ್ಕರ್,ಕೃಷ್ಣಯ್ಯ,ಕರುಣಾಕರHc ಗಳಾದ ಬಾಲಕೃಷ್ಣ, ಉಮೇಶ್,ಸತೀಶ್, ನವೀನ್ pc ಮಂಜುನಾಥ,ಪುನೀತ್ ಆನಂದ ನಾಯ್ಕಹಾಗೂ ಡಿಸಿಐಬಿ ಸಿಬ್ಬಂದಿಯವರಾದ ನಾರಾಯಣ,ವಾಸು ನಾಯ್ಕ, ಲಕ್ಷ್ಮಣ ಕೆ.ಜಿ, ಇಕ್ಬಾಲ್ ಎ.ಇ, ಉದಯ ರೈ, ಪ್ರವೀಣ್ ಎಂ, ತಾರಾನಾಥ್ ,ಉದಯ ಗೌಡ, ಪ್ರವೀಣ ರೈ, ಶೋನ್ಶಾ ಮತ್ತು ಸುರೇಶ್ ಪೂಜಾರಿರವರು ನೇತ್ರತ್ವದ ತಂಡದ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.


Spread the love