ಸೆ 21 : ಉಡುಪಿ ಜಿಲ್ಲೆಯಲ್ಲಿ 233 ಮಂದಿಗೆ ಕೊರೋನಾ ಪಾಸಿಟಿವ್ , 4 ಸಾವು

Spread the love

ಸೆ 21 : ಉಡುಪಿ ಜಿಲ್ಲೆಯಲ್ಲಿ 233 ಮಂದಿಗೆ ಕೊರೋನಾ ಪಾಸಿಟಿವ್ , 4 ಸಾವು

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಟ್ಟು 233 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 15624 ಕ್ಕೆ ಏರಿಕೆಯಾಗಿದೆ .

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ಸೋಂಕಿತರಲ್ಲಿ ಉಡುಪಿಯ 111, ಕುಂದಾಪುರದ 55, ಕಾರ್ಕಳದ 47 ಹಾಗೂ ಇತರೆ ಜಿಲ್ಲೆಗಳ 20 ರೋಗಿಗಳು ಇದ್ದಾರೆ. 135 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 98 ಮಂದಿಗೆ ಲಕ್ಷಣಗಳು ಇಲ್ಲ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಸಂಪರ್ಕದ 140, ಐಎಲ್ಐ ಲಕ್ಷಣಗಳಿರುವ 78, ‘ಸಾರಿ’ ಲಕ್ಷಣಗಳಿರುವ 6 ಮಂದಿಗೆ, ಹಾಗೂ ಅಂತರ್ ಜಿಲ್ಲೆ, ಅಂತರ್ ರಾಜ್ಯ ಹಾಗೂ ವಿದೇಶದಿಂದ ಬಂದ 4 ಮಂದಿಗೆ ಸೋಂಕು ತಗುಲಿದ್ದು, 5 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 792 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 619 ವರದಿಗಳು ನೆಗೆಟಿವ್ ಬಂದಿದ್ದು, 233 ಪಾಸಿಟಿವ್ ಬಂದಿವೆ. 119 ವರದಿಗಳು ಬರುವುದು ಬಾಕಿ ಇದೆ.

ಸೋಮವಾರ ಒಟ್ಟು 278 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೂ 14114 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1366 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ  ಸೋಮವಾರ 4 ಮಂದಿ ಸೋಂಕಿನಿಂದ ಮೃತರಾಗಿದ್ದು ಇದುವರೆಗೆ ಕೊರೋನಾದಿಂದ ಒಟ್ಟು 144 ಮಂದಿ ಸಾವನಪ್ಪಿದ್ದಾರೆ.


Spread the love