ಸೆ. 6 ರಿಂದ ಸೆ.10 – ರಂಜನಿ ಸಂಸ್ಮರಣಾ ಕಾರ್ಯಕ್ರಮಗಳು

Spread the love

ಸೆ. 6 ರಿಂದ ಸೆ.10 – ರಂಜನಿ ಸಂಸ್ಮರಣಾ ಕಾರ್ಯಕ್ರಮಗಳು

ಉಡುಪಿ: ರಂಜನಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಸೆ. 6 ರಿಂದ ಸೆ.10 ರ ವರೆಗೆ ರಂಜನಿ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಭಾಗಿತ್ವ ವಹಿಸಲಿರುವ ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಸೆ.6 ರಂದು ಶುಕ್ರವಾರ, ಸಂಜೆ 5.30 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮಣಿಪಾಲ ಡಾಟ್ ನೆಟ್ ಪ್ರೈವೇಟ್ ಲಿಮಿಟೆಡ್ ನ ಶಶಿಕಲಾ ಮತ್ತು ನರಸಿಂಹ ಭಟ್ ಹಾಗೂ ಬಲ್ಲಾಳ್ ಡೆವೆಲಪರ್ಸ್ ನ ನಾಗರಾಜ ಬಲ್ಲಾಳ ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ, ಬೆಂಗಳೂರಿನ ಐಶ್ಚರ್ಯಾ ವಿದ್ಯಾ ರಘುನಾಥ್ ಅವರ ಹಾಡುಗಾರಿಕೆ ನಡೆಯಲಿದೆ.

ಸೆ.7 ರಂದು ಶನಿವಾರ, ಸಂಜೆ 4.30 ಕ್ಕೆ ಮಣಿಪಾಲದ ದಿವ್ಯಶ್ರೀ ಅವರ ಹಾಡುಗಾರಿಕೆ, 5.45 ಕ್ಕೆ ಚೆನ್ನೈನ ಪ್ರಸನ್ನ ವೆಂಕಟರಾಮ್ ಅವರ ಹಾಡುಗಾರಿಕೆ ನಡೆಯಲಿದೆ.

ಸೆ.8 ರಂದು ಆದಿತ್ಯವಾರ ಬೆಳಿಗ್ಗೆ 9.30 ಕ್ಕೆ ‘ಶಾಸ್ತ್ರೀಯ ಸಂಗೀತವನ್ನು ನಾವು ಯಾರಿಗಾಗಿ ಹಾಡಬೇಕು?’ ಈ ವಿಷಯದ ಕುರಿತು ಲಕ್ಷ್ಮೀಶ ತೋಳ್ಪಾಡಿ ಅವರ ಉಪನ್ಯಾಸ ನಡೆಯಲಿದೆ. 10.45 ಕ್ಕೆ ಅರ್ಚನಾ ಮತ್ತು ಸಮನ್ವಿ ಅವರಿಂದ ‘ಕರ್ನಾಟಕ ಸಂಗೀತದಲ್ಲಿ ಗ್ರಹಭೇದಗಳು’ ಎಂಬ ವಿಷಯದಲ್ಲಿ ಸೋದಾಹರಣ ಉಪನ್ಯಾಸ ನಡೆಯಲಿದೆ. ಸಮನ್ವಯಕಾರರಾಗಿ ಬೆಂಗಳೂರಿನ ಡಾ.ಟಿ.ಎಸ್. ಸತ್ಯವತಿ ಭಾಗವಹಿಸುತ್ತಾರೆ. ಸಂಜೆ 5.30 ಕ್ಕೆ ವಿಜಯವಾಡದ ಮಲ್ಲಾಡಿ ಸಹೋದರರಿಂದ ಹಾಡುಗಾರಿಕೆ ನಡೆಯಲಿದೆ.

ಸೆ.9 ರಂದು ಸೋಮವಾರ ಸಂಜೆ 5.15 ಕ್ಕೆ ಚಿಕ್ಕಮಗಳೂರಿನ ಹಿರೇಮಗಳೂರು ಕಣ್ಣನ್ ಅವರಿಂದ ಉಪನ್ಯಾಸ ನಡೆಯಲಿದೆ. ಸಂಜೆ 6.30 ಕ್ಕೆ ಮೈಸೂರಿನ ಶ್ರೀಮತಿದೇವಿ ಅವರ ಹಾಡುಗಾರಿಕೆ ಆಯೋಜಿಸಲಾಗಿದೆ.

ಸೆ.10 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಛಾಯಾಪತಿ ಗುರೂಜಿ ಅವರ ನೇತೃತ್ವದಲ್ಲಿ ಸತ್ಸಂಗ, ಮಧ್ಯಾಹ್ನ ಎರಡು ಗಂಟೆಗೆ ಸ್ಥಳೀಯ ಕಲಾವಿದರಿಂದ ಗಾನಸೌರಭ, ಸಂಜೆ 4 ಕ್ಕೆ ಮೈಸೂರಿನ ಹರೀಶ್ ಪಾಂಡವ್ ಅವರ ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ವಿಜಯ್ ಹಾಗೂ ಮಣಿಪಾಲ ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ.ಪೈ ಭಾಗವಹಿಸುವರು. ಸಂಜೆ 6.30 ಕ್ಕೆ ಬೆಂಗಳೂರಿನ ಹೇರಂಭ ಮತ್ತು ಹೇಮಂತ ಅವರ ದ್ವಂದ್ವ ಕೊಳಲುವಾದನ ನಡೆಯಲಿದೆ ಎಂದು ಟ್ರಸ್ಟ್ ನ ಮುಖ್ಯಸ್ಥರಾದ ವಿ.ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ.


Spread the love