ಸೈಕಲ್ ರೇಸಿನ ಬಗ್ಗೆ ಅರಿವು ಮೂಡಿಸಲು ಕೋಸ್ಟಲ್ ಸೈಕ್ಲಾತಾನ್ 2018

Spread the love

ಸೈಕಲ್ ರೇಸಿನ ಬಗ್ಗೆ ಅರಿವು ಮೂಡಿಸಲು ಕೋಸ್ಟಲ್ ಸೈಕ್ಲಾತಾನ್ 2018

ಮಂಗಳೂರು: ಎಸ್.ಆರ್.ಎಸ್. ಗ್ಲೋಬಲ್ ಇಂಡಸ್ಟ್ರಿಸ್ ಸೊಲ್ಯುಶನ್ಸ್, ವಿ.ಆರ್. ಸೈಕಲಿಂಗ್ ಕ್ಲಬ್ ಹಾಗೂ ತಾಜ್ ಸೈಕಲ್ ಕಂಪನಿ ವತಿಯಿಂದ ಕರಾವಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರಿಂಕ್ಸ್ ಅರ್ಪಿಸುವ ಕೋಸ್ಟಲ್ ಸೈಕ್ಲಾತಾನ್ 2018 ಜಿಲ್ಲಾ ಮಟ್ಟದ ಶಾಲೆ ಮಕ್ಕಳಿಗಾಗಿ ಸೈಕಲ್ ರೇಸನ್ನು ದಿನಾಂಕ 28 ಜನವರಿಯಂದು ಇರ ಹಿಲ್ಸ್ ಮುಡಿಪುನಲ್ಲಿ ಆಯೋಜಿಸಲಾಗಿತ್ತು.

ಕರಾವಳಿಯ ಜಿಲ್ಲೆಗಳಾದ ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ಸೈಕಲ್ ರೇಸಿನ ಬಗ್ಗೆ ಅರಿವು ಮೂಡಿಸಲು, ಪ್ರೋತ್ಸಾಹಿಸಲು, ಉನ್ನತ್ತಿಸಲು ಈ ಸೈಕಲ್ ರೇಸನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸೈಕಲ್ ರೇಸನ್ನು ಟ್ರಿಂಕ್ಸ್ ಮಾರುಕಟ್ಟೆಯ ಮುಖ್ಯಾಧಿಕಾರಿಗಳಾದ ಸಂದೀಪ್, ಸುಧಾಕರ ಕುದ್ರೋಳಿ, ಕಾರ್ಯನಿರ್ವಹಣಾ ಅಧಿಕಾರಿ ಸರೋಜ ಆಸ್ಪತ್ರೆ ಹಾಗೂ ತಾಜ್ ಸೈಕಲ್ ಕಂಪನಿಯ ಮುಖ್ಯಸ್ಥರಾದ ಮುತಾಲಿಬ್ ಎಸ್.ಎಂ. ಇವರುಗಳು ಉದ್ಘಾಟಿಸಿದರು.

ಸೈಕಲ್ ರೇಸಿನಲ್ಲಿ ಮಂಗಳೂರು ನಗರದ 10 ವಿವಿಧ ಶಾಲೆಗಳ 50 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ರೇಸಿನಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಿಲಾಗಿತ್ತು. 11-13   ಮತ್ತು 14-16   ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಆಯೋಜಿಸಲಾಗಿತ್ತು.


Spread the love