ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಉಡುಪಿ: ಮನೆಗೊಂದರಂತೆ ಗಿಡ ನೆಡುವ ಅಭಿಯಾನವನ್ನು ನಾವೆಲ್ಲಾ ಒಟ್ಟಾಗಿ ಮಾಡಬೇಕಾಗಿದೆ. ಮುಂದಿನ ಪೀಳಿಗೆಯ ಬಾಳನ್ನು ಹಸನು ಮಾಡಲು ಪರಿಸರ ಸ್ವಚ್ಛ ಇಡುವ ಮೂಲಕ ಕಾರ್ಯಕ್ರಮ ರೂಪಿಸಬೇಕು ಎಂದು ನಗರಸಭಾ ಸದಸ್ಯ ವಿಜಯ ಕೆ. ಕೊಡವೂರು ಅಭಿಪ್ರಾಯ ಪಟ್ಟರು.
ಅವರು ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಸ್ ಕೆ ಪಿ ಎ ಉಡುಪಿ ವಲಯದ ವತಿಯಿಂದ ಕೊಡವೂರಿನ ಕೆರೆಕಟ್ಟೆ ಗಣಪತಿ ಗುಡಿಯ ವಠಾರವನ್ನು ಸ್ವಚ್ಚ ಗೊಳಿಸಿ ವನಮಹೋತ್ಸವ ವನ್ನು ನೆರವೇರಿಸಿ ಸುಮಾರು 75 ಗಿಡಗಳನ್ನು ನೆಟ್ಟು ಮಾತನಾಡಿದರು.
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಉಡುಪಿ ವಲಯದ ವತಿಯಿಂದ ಕೊಡವೂರಿನ ಗಣಪತಿ ಕೆರೆಕಟ್ಟೆ ದೇವಾಸ್ಥಾನದ ವಠಾರವನ್ನು ಸ್ವಚ್ಚ ಗೊಲಿಸಲಾಯಿತು ಮತ್ತು ಸುಮಾರು 75 ಗಿಡಗಳನ್ನು ನೆಡಲಾಯಿತು ಹಾಗೂ ಆಗಮಿಸಿದ ಎಲ್ಲಾ ಸದಸ್ಯರಿಗೂ ಗಿಡವನ್ನು ನೀಡಿ ವನಮಹೋತ್ಸವವನ್ನು ಆಚರಿಸಲಾಯಿತು
ಈ ಸಂದರ್ಭದಲ್ಲಿ ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾ ಪ್ರಕಾಶ್ ಜಿ., ಜಿಲ್ಲಾಧ್ಯಕ್ಷ ಕರಂಡಾಡಿ ಶ್ರೀಧರ್ ಶೆಟ್ಟಿಗಾರ್, ಗೌರವಾಧ್ಯಕ್ಷ ಶಿವ ಕೆ.ಅಮೀನ್, ಉಪಾಧ್ಯಕ್ಷ ನವೀನ್ ಬಳ್ಳಾಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ್ ಪೂಜಾರಿ ಕೊಳಲಗಿರಿ ಉಪಸ್ಥಿತರಿದ್ದರು.
ವಲಯಾಧ್ಯಕ್ಷ ಪ್ರಕಾಶ್ ಎಸ್. ಕೊಡಂಕೂರು ಸ್ವಾಗತಿಸಿದರು. ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು ನಿರೂಪಿಸಿದರು. ಕಾರ್ಯದರ್ಶಿ ಸುಕೇಶ್.ಕೆ ಅಮೀನ್ ವಂದಿಸಿದರು.