ಸ್ಥಳೀಯ ಸಂಸ್ಥೆಯಗಳಿಗೆ ನಿಯಮಾವಳಿಗೆ ಅನುಗುಣವಾಗಿ ಮೀಸಲಾತಿಯನ್ನು ನಿಗದಿ ಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿ – ಸಚಿವ ಕೋಟ
ಕುಂದಾಪುರ : ಈ ಹಿಂದೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಅಂದಿನ ರಾಜ್ಯ ಸರ್ಕಾರ ಉಚ್ಛ ನ್ಯಾಯಾಲಯಕ್ಕೆ ಮೀಸಲಾತಿಯನ್ನು ಸಿದ್ದಪಡಿಸಿ ಅದೇ ಪ್ರಕಾರದಲ್ಲಿ ಮೀಸಲಾತಿ ನಿಗದಿ ಪಡಿಸುವ ಕುರಿತು ತಿಳಿಸಿತ್ತು. ಆದರೆ ನಂತರದ ದಿನಗಳಲ್ಲಿ ಈ ಪಟ್ಟಿ ಬದಲಾವಣೆಯಾದ ಕಾರಣಕ್ಕಾಗಿ ವಿವಾದ ಪುನ: ನ್ಯಾಯಾಲಯದ ಮೇಟ್ಟಿಲೇರಿರುವುದರಿಂದಾಗಿ ಚುನಾವಣೆ ನಡೆದಿರುವ ಸ್ಥಳೀಯಾಡಳಿತಗಳಲ್ಲಿ ಅಧಿಕಾರಕ್ಕೆ ತೊಡಕಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಲ್ಲಿನ ಶ್ರೀ ರಾಮ ಮಂದಿರ ರಸ್ತೆಯಲ್ಲಿ ಇರುವ ಪ್ರಭಾಕರ ಪಡಿಯಾರ್ಅವರ ಮನೆಗೆ ಮಂಗಳವಾರ ಭೇಟಿ ಕೇಂದ್ರ ಸರ್ಕಾರದ ಸಾಧನೆಯ ಹೊತ್ತಿಗೆ ’ಆತ್ಮ ನಿರ್ಬರ ಭಾರತ’ ನೀಡುವ ಸಂದರ್ಭದಲ್ಲಿ ಪುರಸಭೆಯ ಅಧಿಕಾರದ ಬಗ್ಗೆ ಪ್ರಾಸ್ತಾಪಿಸಿದ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಮೋಹನ್ದಾಸ್ಶೆಣೈ ಅವರಿಗೆ ಸಚಿವರು ಉತ್ತರಿಸಿದರು.
ವಿವಾದ ನ್ಯಾಯಲಯದಲ್ಲಿ ಇರುವುದರಿಂದ ಸರ್ಕಾರ ಕಾನೂನು ತಜ್ಞರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುಲಾಗುತ್ತಿದೆ. ನಿಯಮಾವಳಿಗೆ ಅನುಗುಣವಾಗಿ ಮೀಸಲಾತಿಯನ್ನು ನಿಗದಿ ಪಡಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ಸರ್ಕಾರದ ಈ ಪ್ರಕ್ರಿಯೆಗಳನ್ನು ನ್ಯಾಯಾಲಯ ಒಪ್ಪಿದ್ದಲ್ಲಿ ಶೀಘ್ರವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆದು ಅಧಿಕಾರ ಹಸ್ತಾಂತರ ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪುರಸಭಾ ಚುನಾವಣೆ ನಡೆದು 2 ವರ್ಷ ಕಳೆಯುತ್ತಿದ್ದರೂ, ಸದಸ್ಯರಿಗೆ ಇನ್ನೂ ಅಧಿಕಾರ ಹಸ್ತಾಂತರ ಆಗಿಲ್ಲ. ಇದರಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ತೊಡಕಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಮೋಹನ್ದಾಸ್ಶೆಣೈ ಅವರಿಗೆ ಉತ್ತರಿಸಿದ ಸಚಿವರು, ಚುನಾವಣೆಯಲ್ಲಿ ಚುನಾಯಿತರಾಗಿರುವ ಕುರಿತು ಪ್ರಮಾಣ ಪತ್ರ ಪಡೆದವರಿಗೆ ಅಧಿಕಾರ ಹಂಚಿಕೆಯಾಗದೆ ಇರುವುದರಿಂದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅವರನ್ನು ಕಡೆಗಣಿಸ ಬಾರದು ಎಂದು ಅಧಿಕಾರಿಗಳಿಗೆ ಸ್ವಷ್ಟ ಸೂಚನೆಯನ್ನು ನೀಡಲಾಗಿದೆ. ಅಧಿಕೃತ ಸಭೆಗಳಿಗೆ ಅಹ್ವಾನ ನೀಡುವುದನ್ನು ಹೊರತು ಪಡಿಸಿ, ಅವರವರ ವಾರ್ಡ್ಗಳ ಅಭಿವೃದ್ಧಿ ಯೋಜನೆ ಹಾಗೂ ಕ್ರೀಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಆಯ್ಕೆಯಾಗಿರುವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದ್ದು, ಮಂಗಳೂರು ಜಿಲ್ಲೆಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಇಲ್ಲಿಯೂ ಈ ಕ್ರಮವನ್ನು ಅನುಸರಿಸಲು ಸೂಚಿಸುವುದಾಗಿ ಸಚಿವರು ಭರವಸೆ ನೀಡಿದರು.
ಮೀನುಗಾರಿಕಾ ಫೆಡರೇಶನ್ಅಧ್ಯಕ್ಷ ಯಶಪಾಲ್ಸುವರ್ಣ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜೆ, ಎಪಿಎಂಸಿ ಸದಸ್ಯ ಸುಧೀರ್ಕೆ.ಎಸ್,ಪುರಸಭಾ ಸದಸ್ಯರಾದ ಸಂದೀಪ್ಖಾರ್ವಿ, ಸಂತೋಷ್ಶೆಟ್ಟಿ, ರಾಘವೇಂದ್ರ ಖಾರ್ವಿ, ಮಂಡಲ ಕಾರ್ಯದರ್ಶಿ ಅರುಣ್ಬಾಣಾ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಗುಣರತ್ನ ಪಿ, ಸದಾನಂದ ಬಳ್ಕೂರು, ಕಿದಿಯೂರು ಸತೀಶ್ಶೆಟ್ಟಿ ಇದ್ದರು.