ಸ್ವಚ್ಚ ಭಾರತದಿಂದ ಸಧೃಡ ಆರೋಗ್ಯಯುತ ಬಾಳು-ಅಭಿವೃದ್ಧಿಯ ಭಾರತ ನಿರ್ಮಾಣ ಸಾಧ್ಯ : ಡಾ.ವೈ.ಭರತ್ ಶೆಟ್ಟಿ

Spread the love

ಸ್ವಚ್ಚ ಭಾರತದಿಂದ ಸಧೃಡ ಆರೋಗ್ಯಯುತ ಬಾಳು-ಅಭಿವೃದ್ಧಿಯ ಭಾರತ ನಿರ್ಮಾಣ ಸಾಧ್ಯ : ಡಾ.ವೈ.ಭರತ್ ಶೆಟ್ಟಿ

ಸುರತ್ಕಲ್: ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷದಲ್ಲಿ ಗಂಭೀರವಾಗಿ ಪರಿಗಣಿಸಿ ದೇಶದಾದ್ಯಂತ ಸ್ವಚ್ಚತೆಗೆ ಕರೆ ಕೊಟ್ಟ ಬಳಿಕ ಬಹಳಷ್ಟು ಬದಲಾವಣೆ ಆಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.

ಸುರತ್ಕಲ್ ಬಳಿಯ ಕಟ್ಲದಲ್ಲಿ ಭಾರತ ಸರಕಾರದ ಉದ್ಯಮ ಸಂಸ್ಥೆ ಬ್ರಿಡ್ಜ್ ರೂಫ್ ಕಂಪನಿಯು ಸ್ವಚ್ಚತಾ ಹೀ ಸೇವಾ ,ಏಕ ಕದಂ ಸ್ವಚ್ಚತಾ ಕೀ ಓರ್ ಆಯೋಜಿಸಿದ್ದು ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಹಾತ್ಮಾ ಗಾಂಧೀಜಿ ಅವರು ತಮ್ಮ ಜೀವಿತಾವಧಿಯ ಉದ್ದಕ್ಕೂ ಸ್ವಚ್ಚತೆಗೆ ಆದ್ಯತೆ ನೀಡಿದ್ದರು.ದೇಶವು ಸ್ವಚ್ಚತೆಯಿಂದ ಆರೋಗ್ಯ ,ಉತ್ತಮ ಆರೋಗ್ಯದಿಂದ ಕೆಲಸ ,ಅಭಿವೃದ್ಧಿ ಸಾಧ್ಯವಾಗಲಿದೆ ಎಂದಿದ್ದರು.ಗಾಂಧೀಜಿ ಕನಸನ್ನು ಇದೀಗ ಮೋದಿ ನನಸು ಮಾಡುತ್ತಿದ್ದಾರೆ.ಸ್ವಚ್ಚತೆಗೆ ಕಳೆದ ನಲ್ಕು ವರ್ಷದಿಂದ ಆದ್ಯತೆ ನೀಡಿ ದೇಶದ ಮೂಲೆ ಮೂಲೆಯಲ್ಲೂ ಸಂಘ ಸಂಸ್ಥೆಗಳು ಸ್ವಚ್ಚತೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಈ ಸ್ವಚ್ಚತೆ ಕೇವಲ ಕಾಟಾಚಾರಕ್ಕೆ ಸೀಮಿತವಾಗ ಬಾರದು ನಿತ್ಯ ನಮ್ಮ ಸುತ್ತಮುತ್ತ ನಾವೇ ಮಾಡುವ ಮೂಲಕ ಇತರರಿಗೆ ಮಾದರಿಯಾಗ ಬೇಕು ಎಂದರು.

ಮಾಜಿ ಶಾಸಕ ಮೊೈದೀನ್ ಬಾವಾ ಮಾತನಾಡಿ ನಿತ್ಯ ನಾವು ನಮ್ಮ ಮನೆಗಳನ್ನು ಸ್ವಚ್ಚ ಮಾಡುವಂತೆ, ನಮ್ಮ ಆರೋಗ್ಯವನ್ನು ನೋಡಿಕೊಳ್ಳುವಂತೆ ನಮ್ಮ ಪರಿಸರವನ್ನು ಕಾಪಾಡಿಕೊಳ್ಳ ಬೇಕಿದೆ ಎಂದರು.

ಮಂಗಳೂರು ತಾಲೂಕು ನಾಗರಿಕ ಸಮಿತಿಯ ಸುಭಾಶ್ಚಂದ್ರ ಶೆಟ್ಟಿ ಶುಭ ಹಾರೈಸಿ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದರು. ಬ್ರಿಡ್ಜ್ ಆಂಡ್ ರೂಫ್ ಇಂಡಿಯಾ ಸಂಸ್ಥೆಯ ರೆಸಿಡೆಂಟ್ ಮ್ಯಾನೇಜರ್ ದೇವಬ್ರತ ಬೋಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು ಮುನ್ನೂರಕ್ಕೂ ಹೆಚ್ಚು ಸಿಬಂದಿಗಳು ಸ್ವಚ್ಚತಾ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಸ್ಥಳೀಯ ಕಾರ್ಪೊರೇಟರ್ ಗುಣಶೇಖರ ಶೆಟ್ಟಿ, ಉದ್ಯಮಿ ಎಂ.ಜೆ.ಶೆಟ್ಟಿ, ರಾವ್ ಇನ್ಫ್ರಾ ಸಂಸ್ಥೆಯ ರಾಘವೇಂದ್ರ ರಾವ್ , ಸಂಸ್ಥೆಯ ಎಂಜಿನಿಯರ್ಗಳು, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಲೀಲಾಧರ ಶೆಟ್ಟಿ ಸ್ವಾಗತಿಸಿ ವಂದಿಸಿದರು.


Spread the love