ಸ್ವಾಭಿಮಾನದತ್ತ ಹೆಜ್ಜೆ – ಪರಿವರ್ತನ ಟ್ರಸ್ಟ್ ಮೂಲಕ ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ನೋಂದಣಿಗೆ ಚಾಲನೆ

Spread the love

ಸ್ವಾಭಿಮಾನದತ್ತ ಹೆಜ್ಜೆ – ಪರಿವರ್ತನ ಟ್ರಸ್ಟ್ ಮೂಲಕ ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ನೋಂದಣಿಗೆ ಚಾಲನೆ

 

ಮಂಗಳೂರು: ಮಂಗಳಮುಖಿಯರ ಮುಖದಲ್ಲಿ ಸಂಘಟಿತ ಶಕ್ತಿಯ ಕನಸನ್ನು ಬಿತ್ತುವುದರೊಂದಿಗೆ ಸ್ವಾಭಿಮಾನಿಗಳಾಗಿ ಬದುಕುವ ನಿಟ್ಟಿನಲ್ಲಿ ಆರಂಭಗೊಂಡ ಪರಿವರ್ತನ ಚಾರಿಟೇಬಲ್ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿ ಡಾ|ಜಗದೀಶ್ ಅವರ ಸಹಾಯದೊಂದಿಗೆ ಮಹತ್ವಾಕಾಂಕ್ಷಿಯಾದ ಆಧಾರ್ ನೋಂದಣಿ ಪ್ರಕ್ರಿಯೆಗೆ ಶುಕ್ರವಾರ ಟ್ರಸ್ಟಿನ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಮಂಗಳಮುಖಿಯರಿಗೆ ಆಧಾರ್ ನೋಂದಣಿ ಪ್ರಕ್ರಿಯೆ ಸಾರ್ವಜನಿವಾಗಿ  ನಡೆದಿರುವುದು ರಾಜ್ಯದ ಇತಿಹಾಸದಲ್ಲಿ ಪ್ರಥಮವಾಗಿದೆ.

ಇತ್ತೀಚಿನ ಡಿಸೆಂಬರ್ 17ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ  ಮಂಗಳಮುಖಿಯರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಪಡಿತರ ಚೀಟಿ ಹಾಗೂ ಮನೆ ಇಲ್ಲದ ವಿಷಯ ಪ್ರಸ್ತಾಪವಾಗಿತ್ತು. ಈ ಕುರಿತು ಕೂಡಲೇ ಕ್ರಮಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದರು. ಅಲ್ಲದೆ ಜಿಲ್ಲಾಧಿಕಾರಿಗಳು ಆಧಾರ್ ಇಲಾಖೆ ವತಿಯಿಂದ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ನೀಡುವಂತೆ ಸೂಚನೆ ನೀಡಿದ್ದರು.

image001transgender-aadhaar-camp-mangalorean-com-20161229-001 image002transgender-aadhaar-camp-mangalorean-com-20161229-002 image003transgender-aadhaar-camp-mangalorean-com-20161229-003 image004transgender-aadhaar-camp-mangalorean-com-20161229-004 image005transgender-aadhaar-camp-mangalorean-com-20161229-005 image006transgender-aadhaar-camp-mangalorean-com-20161229-006 image007transgender-aadhaar-camp-mangalorean-com-20161229-007 image008transgender-aadhaar-camp-mangalorean-com-20161229-008 image009transgender-aadhaar-camp-mangalorean-com-20161229-009 image010transgender-aadhaar-camp-mangalorean-com-20161229-010 image011transgender-aadhaar-camp-mangalorean-com-20161229-011 image012transgender-aadhaar-camp-mangalorean-com-20161229-012

ಜಿಲ್ಲಾಧಿಕಾರಿಗಳ ಆದೇಶದಂತೆ ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ಹೊಂದಿರುವಂತೆ ಮಾಡುವ ಸಲುವಾಗಿ ನೇತೃತ್ವ ವಹಿಸಿತು. ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ಹೊಂದಲು ಗಜೇಟೆಡ್ ಅಧಿಕಾರಿಯಿಂದ ಪರವಾನಿಗೆ ಪಡೆದು ಟ್ರಸ್ಟಿನ ವಿಳಾಸದಡಿಯಲ್ಲಿ ಅವಕಾಶ ನೀಡಲಾಗಿದೆ.

ಅದರಂತೆ ಶುಕ್ರವಾರ ಟ್ರಸ್ಟಿನ ಕಚೇರಿಯಲ್ಲಿ ವಿಶೇಷ ಆಧಾರ್ ಕಾರ್ಡ್ ಕ್ಯಾಂಪ್ ಆಯೋಜಿಸಲಾಯಿತು. ಸಮನ್ವಯಕಾರ ನರೇಂದ್ರ ನಾಯಕ್ ಮತ್ತು ಶ್ವೇತಾ ಶರತ್ ಅವರು ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ಅರ್ಜಿ ಪಡೆಯುವ ಕೆಲಸದಲ್ಲಿ ಸಹಕಾರ ನೀಡುತ್ತಿದ್ದಾರೆ.

ಈ ಕುರಿತು ಮಾತನಾಡಿದ ಮಂಗಳಮುಖಿ ಸಂಜನಾ ಟ್ರಸ್ಟ್ ಆರಂಭದ ಮೊದಲು ನಮ್ಮನ್ನು ಯಾರೂ ಕೂಡ ಗುರುತಿಸಿರಲಿಲ್ಲ. ಅಗಸ್ಟ್ 30ರಂದು ವಾಯ್ಲೆಟ್ ಪಿರೇರಾರವರ ಸಮರ್ಥ ನಾಯಕತ್ವದಲ್ಲಿ ಇತರ ಟ್ರಸ್ಟಿಗಳ ಸಹಕಾರದೊಂದಿಗೆ ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆಗೊಂಡಿತು. ಆರಂಭದಲ್ಲಿ ಸ್ವಲ್ಪ ಕಷ್ಟ ಸಮಸ್ಯೆಗಳು ಎದುರಾದರೂ ಕೂಡ  ಟ್ರಸ್ಟಿನ ಸಹಕಾರದೊಂದಿಗೆ ನಮ್ಮಲ್ಲಿ ನಾವು ಬದಲಾವಣೆಗಳನ್ನು ಕಂಡುಕೊಳ್ಳುತ್ತಿದ್ದೇವೆ. ಇತರಂತೆಯೇ ನಾವೂ ಕೂಡ ಸ್ವಾಭಿಮಾನಿಗಳಾಗಿ ಬದುಕುವ ಅಪೇಕ್ಷೆ ಹೊಂದಿದ್ದು, ಅದರಂತೆ ಸ್ವ-ಅಭಿವೃದ್ಧಿ ತರಬೇತಿಗೆ ನೋಂದಣಿಯಾಗಿದ್ದೇವೆ. ಅದರಂತೆ ಬ್ಯೂಟಿಶಿಯನ್ ಕೋರ್ಸಿಗೆ ಅರ್ಜಿಯನ್ನು ಸಲ್ಲಿಸಿದ್ದೇನೆ. ಪರಿವರ್ತನ ಟ್ರಸ್ಟ್ ನಮ್ಮವರ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆಯನ್ನು ನೀಡುತ್ತಿದೆ, ನಮಗೆ ಸರಕಾರ ಹಾಗೂ ಸಮಾಜದಿಂದ ಹೆಚ್ಚಿನ ಬೆಂಬಲ ಪ್ರೋತ್ಸಾಹದ ಅಗತ್ಯವಿದೆ. ಇದರಲ್ಲಿ ಟ್ರಸ್ಟ್ ಯಶಸ್ವಿಯಾಗಲಿದ್ದು ನಮ್ಮನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತರುವುದರೊಂದಿಗೆ ಇತರರಂತೆಯೇ ಗೌರವಿಸುವಂತಾಗಬೇಕು ಎಂದರು.

ಮಂಗಳಮುಖಿಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಸಲುವಾಗಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮಂಗಳಮುಖಿಯರು ಸಮಾಜದಲ್ಲಿ ತಿರಸ್ಕರಿಸಲ್ಪಟ್ಟಿದ್ದು, ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಸರಕಾರದ ಸ್ವ-ಉದ್ಯೋಗ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದು 10 ಅರ್ಜಿಗಳಿಗೆ ಒಪ್ಪಿಗೆ ಸಿಕ್ಕಿದೆ. ಸ-ಉದ್ಯೋಗ ತರಬೇತಿಯಲ್ಲಿ ಪ್ರತಿ ವರ್ಷ 20 ಮಂಗಳಮುಖಿಯರಿಗೆ ಸ್ವ-ಉದ್ಯಮದ ತರಬೇತಿಯನ್ನು ನೀಡಲಾಗುತ್ತದೆ. ನಾವು ಇತರರಿಗೂ ಟೈಲರಿಂಗ್, ಬ್ಯೂಟಿಶಿಯನ್ ವಿಷಯದಲ್ಲಿ ಆಸಕ್ತಿ ಹೊಂದಿದವರಿಗೆ ಕೂಡ ನೀಡಲು ಚಿಂತಿಸಿದ್ದೇವೆ. ಇದರ ಅರ್ಜಿಗಳು ಸದ್ಯದಲ್ಲಿಯೇ ಕಚೇರಿಯಲ್ಲಿ ಲಭಿಸಲಿವೆ. ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ನೋಂದಣಿಗೆ ಟ್ರಸ್ಟಿನ ಕಚೇರಿಯಲ್ಲಿ ವ್ಯವಸ್ಥೆ ಮಾಡಿದ ಜಿಲ್ಲಾಧಿಕಾರಿಗೆ ಧನ್ಯವಾದಗಳು. ಆಧಾರ್ ಕಾರ್ಡ್ ನೋಂದಣಿ ಡಿಸೆಂಬರ್ 31 ರ ವರೆಗೆ ಮುಂದುವರೆಯಲಿದ್ದು, ಉಳಿದ ಮಂಗಳಮುಖಿಯರಿಗೂ ಯಾರಿಗೆ ಆಧಾರ್ ಕಾರ್ಡ್ ಅವಶ್ಯಕತೆ ಇದೆಯೋ ಅವರಿಗೂ ಮಾಡಿಕೊಡಲಾಗುವುದು ಎನ್ನುತ್ತಾರೆ ಟ್ರಸ್ಟಿನ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ವಾಯ್ಲೆಟ್ ಪಿರೇರಾ.

ಸಾರ್ವಜನಿಕರಿಗೆ ಹಾಗೂ ಮಂಗಳಮುಖಿಯರು ಯಾರಿಗಾದರೂ ಆಧಾರ್ ಕಾರ್ಡ್ ನೋಂದಣಿ ಅವಶ್ಯಕತೆಯಿದ್ದಲ್ಲಿ ಮಂಗಳೂರಿನ ಮಿಲಾಗ್ರಿಸ್ ಚರ್ಚಿನ ಎದುರಿಗಿರುವ ಟ್ರಸ್ಟಿನ ಕಚೇರಿಯಲ್ಲ ಅವಕಾಶವಿದೆ.


Spread the love