ಹರೇಕಳ ಹಾಜಬ್ಬರಿಗೆ ರಂಗ ಸ್ವರೂಪ ಪ್ರಶಸ್ತಿ

Spread the love

ಹರೇಕಳ ಹಾಜಬ್ಬರಿಗೆ ರಂಗ ಸ್ವರೂಪ ಪ್ರಶಸ್ತಿ

ಮಂಗಳೂರು: ರಂಗಸ್ವರೂಪ (ರಿ)ಕುಂಜತ್ತಬೈಲ್ ಮಂಗಳೂರು 2019ರ ಸೃಜನಾಂತರಂಗ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮತ್ತು ಅಕ್ಷರ ಸಂತ ಹರೇಕಳ ಹಾಜಬ್ಬ ರವರಿಗೆ ‘ರಂಗ ಸ್ವರೂಪ ಪ್ರಶಸ್ತಿ’ ಪ್ರದಾನ ಸಮಾರಂಭ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮರಕಡ ಕುಂಜತ್ತಬೈಲ್ ಇಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕತೆ ಯನ್ನು ಆಕಾಶವಾಣಿಯ ವಿಶ್ರಾಂತ ನಿರ್ದೇಶಕರಾದ ಡಾ.ವಸಂತ್ ಕುಮಾರ್ ಪೆರ್ಲ ವಹಿಸಿ ಮಾತನಾಡುತ್ತಾ, ಕೌಶಲ್ಯ ಅಧಾರಿತ ಶಿಕ್ಷಣದ ಅಗತ್ಯತೆ ಇಂದಿನ ಯುವ ಪೀಳಿಗೆಗೆ ಅಗತ್ಯ ವಿದ್ದು ಇಂತಹ ಕಲಿಕೆ ಯನ್ನು ಕಳೆದ 16 ವರ್ಷಗಳಿಂದ ರಂಗ ಸ್ವರೂಪ ನೀಡುತ್ತಾ ಬಂದಿದ್ದು, ಇಂದಿನ ಸಮಾಜಕ್ಕೆ ಒಂದು ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ ರವರು ತಮ್ಮ ಹೋರಾಟದ ಹಾದಿಯನ್ನು ಮೆಲುಕು ಹಾಕುತ್ತಾ ಭಾವುಕರಾದರು.

ಖ್ಯಾತ ಕಲಾವಿದ ಮತ್ತು ಪರಿಸರ ವಾದಿ ದಿನೇಶ್ ಹೊಳ್ಳ, ಮ.ನ.ಪಾ ಮಾಜಿ ಉಪ ಮಹಾ ಪೌರರಾದ ಕೆ.ಮೊಹಮ್ಮದ್, ಸ್ವರೂಪ ಅದ್ಯಯನ ಸಮೂಹ ದ ನಿರ್ದೇಶಕ ಗೋಪಾಡ್ಕರ್ ಶಾಲಾ ಮುಖ್ಯ ಶಿಕ್ಷಕಿ ಮಾಲತಿ, ಸ್ಕೇಟಿಂಗ್ ಬಾಲ ಕ್ರೀಡಾಪಟು ಪರಾಝ್ ಅಲಿ, ಸುಬ್ರಹ್ಮಣ್ಯ ಕಾಸರಗೋಡು, ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಸ್ತಾವಿಸಿದರು, ಅನೀಸಾ ಸ್ವಾಗತಿಸಿದರು, ತಸ‌್ಲೀಮಾ ಬಾನು ಪ್ರಶಸ್ತಿ ಪತ್ರ ವಾಚಿಸಿದರು, ಪ್ರೇಂನಾಥ್ ಮರ್ಣೆ ನಿರೂಪಿಸಿದರು. ಶಿಬಿರ ದಲ್ಲಿ 145 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಬಳಿಕ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು


Spread the love