Spread the love
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ
ಮ0ಗಳೂರು : ಕರ್ನಾಟಕ ಸರ್ಕಾರದಿಂದ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಹಾಲಿಗೆ ನೀಡುತ್ತಿರುವ ರೂ. 5 ಪ್ರೋತ್ಸಾಹಧನ 2017ರ ಮಾರ್ಚ್ ಮತ್ತು ಎಪ್ರಿಲ್ ತಿಂಗಳಿಗೆ ರೂ. 11.52 ಕೋಟಿ ದ.ಕ ಹಾಲು ಒಕ್ಕೂಟಕ್ಕೆ ಬಿಡುಗಡೆಯಾಗಿದೆ.
ಹಾಲು ಉತ್ಪಾದಕರ ಸಹಕಾರಿ ಸಂಘಗಳ ಫಲಾನುಭವಿಗಳ ಆಧಾರ್ ಮುಖಾಂತರ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನ ವರ್ಗಾವಣೆ ಮಾಡಲಾಗುತ್ತದೆ. ಆಗಸ್ಟ್ -2016 ರಿಂದ ಫೆಬ್ರವರಿ-2017ರವರೆಗಿನ ಅಸಮರ್ಪಕ ಆಧಾರ್ ಲಿಂಕೇಜ್ನಿಂದಾಗಿ ವರ್ಗಾವಣೆಗೊಳ್ಳದ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಈಗ ಜೋಡಣೆಯಾದ ಆಧಾರ್ಗೆ ಪಾವತಿಸಲಾಗುವುದು. ಈ ವರೆಗೆ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡದೇ ಇರುವ ಹಾಲು ಉತ್ಪಾದಕರು ಕೂಡಲೇ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿ ವಿವರಗಳನ್ನು ಸಂಘದ ಮುಖಾಂತರ ದ.ಕ ಹಾಲು ಒಕ್ಕೂಟಕ್ಕೆ ನೀಡಲು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love