ಹಾಸನ: ಬಂಡೆ ಬಿದ್ದು ರೈಲು ಪ್ರಯಾಣದಲ್ಲಿ ವ್ಯತ್ಯಯ

Spread the love

ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಶಿರಿವಾಳ ಬಳಿ ರೈಲ್ವೆ ಹಳಿ ಮೇಲೆ ಬಂಡೆ ಬಿದ್ದ ಪರಿಣಾಮ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ರಾತ್ರಿ 2ರಿಂದ 3 ಗಂಟೆ ಸಮಯದಲ್ಲಿ ಕಣ್ಣೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲು ಮಾರ್ಗ ಮಧ್ಯೆಯೇ ಸ್ಥಗಿತಗೊಂಡಿದ್ದು, ಸುಬ್ರಹ್ಮಣ್ಯಕ್ಕೆ ವಾಪಾಸ್ಸು ತೆರಳಿದೆ.

unnamed

ಇತ್ತ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲು ಸಕಲೇಶಪುರದಲ್ಲಿ ನಿಲುಗಡೆಯಾಗಿದ್ದು, ಪ್ರಯಾಣಿಕರನ್ನು ಬಸ್ ಮೂಲಕ ಕಳುಹಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಸಕಲೇಶಪುರ ಕೆಎಸ್​ಆರ್​ಟಿಸಿ ಬಸ್ ಘಟಕದಿಂದ 10 ಬಸ್​ಗಳನ್ನು ತರಿಸಿದ ರೈಲ್ವೆ ಅಧಿಕಾರಿಗಳು ಪ್ರಯಾಣಿಕರನ್ನು ಕಳುಹಿಸಲು ಕ್ರಮ ವಹಿಸಿದ್ದಾರೆ.

ಶಿರಾಡಿ ಘಾಟಿ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಮೂಡಿಗೆರೆ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ವಡಿ ಘಾಟಿ ಮೂಲಕ ಮಂಗಳೂರಿಗೆ ಕಳುಹಿಸಲು ಅಧಿಕಾರಿಗಳು ಮಂದಾಗಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರಯಾಣಿಕರು ಶಿರಾಡಿ ಮೂಲಕವೇ ಕಳುಹಿಸುವಂತೆ ಪಟ್ಟು ಹಿಡಿದಿದ್ದಾರೆ. ಈಗಾಗಲೇ ತಡವಾಗಿದ್ದು, ತುರ್ತ ಅಗತ್ಯ ಹಿನ್ನೆಲೆಯಲ್ಲಿ ಈ ಹತ್ತು ಬಸ್​ಗಳಿಗೆ ಮಾತ್ರ ಶಿರಾಡಿ ಮೂಲಕ ಅವಕಾಶ ಮಾಡಿಕೊಡಿ ಎಂಬುದು ಪ್ರಯಾಣಿಕರ ಆಗ್ರಹವಾಗಿದೆ. ಇದಕ್ಕೆ ಸಮ್ಮತಿಸಿದ್ದು, ಸೂಕ್ತ ವ್ಯವಸ್ಥೆ ಏರ್ಪಡಿಸಲು ರೈಲ್ವೆ ಅಧಿಕಾರಿಗಳು ಮುಂದಾಗಿದ್ದಾರೆ.


Spread the love