ಹಿಂಜಾವೇ ಕಾರ್ಯಕರ್ತರ ಕಾರ್ಯಾಚರಣೆ ; ಕೆದಿಲದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸ ಪತ್ತೆ

Spread the love

 ಹಿಂಜಾವೇ ಕಾರ್ಯಕರ್ತರ ಕಾರ್ಯಾಚರಣೆ ; ಕೆದಿಲದಲ್ಲಿ  ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸ ಪತ್ತೆ

ಮಂಗಳೂರು: ಮಂಗಳೂರು-ಬೆಂಗಳೂರು  ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗಾಗಿ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋ ಮಾಂಸವನ್ನು  ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಸಹಕಾರದಿಂದ ಕೆದಿಲಾ ಗ್ರಾಮದ ಸತ್ತಿಕಲ್ಲು BPCL ಪೆಟ್ರೋಲ್ ಪಂಪ್ ಬಳಿ  ಭಾನುವಾರ ಹಿಡಿಯಲಾಗಿದೆ.

ಪುತ್ತೂರು ನಗರ ಠಾಣಾ ಠಾಣಾಧಿಕಾರಿ ಓಮನ ನೇತ್ರತ್ವದ ತಂಡ 1 ಕ್ವಿಂಟಾಲ್ ಗೂ ಅಧಿಕ ಗೋ ಮಾಂಸ, ಸಾಗಿಸುತ್ತಿದ್ದ ವ್ಯಕ್ತಿ, ಹಾಗೂ ವಾಹನವನ್ನು ವಶಪಡಿಸಿದ್ದಾರೆ.

ಗೋ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯ ಕಡೆಯವರು ಹಾಗು ಸ್ಥಳೀಯ ಹಿಂ.ಜಾ.ವೇ ಕಾರ್ಯಕರ್ತರಿಗೆ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದ್ದು  ಸತ್ತಿಕಲ್ಲಿನಲ್ಲಿ ಪೋಲೀಸು ಬಂದೋಭಸ್ತು ವಿದಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಇದೇ ಕೆದಿಲ ಪರಿಸರದ ಹಲವೆಡೆಗಳಲ್ಲಿ ಅಕ್ರಮ ಕಸಾಯಿಖಾನೆ,ಅಕ್ರಮ ಗೋಸಾಗಾಟ,ನಡೆದಿದ್ದು ಅನೇಕ ಬಾರಿ ಪುತ್ತೂರು ನಗರ ಪೋಲೀಸರು ಕೇಸು ದಾಖಲಿಸಿದ್ದರು.   ಕೆದಿಲದ ಹಲವುಕಡೆಗಳಲ್ಲಿ ಗೋ ವಧೆ ಆಗುತ್ತಿದ್ದು  ನಿತ್ಯವೂ ಅಕ್ರಮ ಸಾಗಾಟ ನಡೆಯುತ್ತಲೇ ಇದೆ ಎಂದು ಸ್ಥಳಿಯರು  ಆರೋಪಿಸಿದ್ದಾರೆ.


Spread the love