ಹಿಂದೂ, ಕ್ರೈಸ್ತ ಭಾಂಧವರೊಂದಿಗೆ ಸಿಹಿ ಹಂಚಿ ಈದ್ ಶುಭಾಶಯ ಕೋರಿದ ಬ್ರಹ್ಮಗಿರಿ ಮುಸ್ಲಿಂ ಭಾಂಧವರು
ಉಡುಪಿ: ರಂಜಾನ್ ಅಂಗವಾಗಿ ಒಂದು ತಿಂಗಳಿನಿಂದ ಉಪವಾಸ ವ್ರತ ಆಚರಿಸಿದ್ದ ಮುಸ್ಲಿಮರು ಉಡುಪಿಯ ಬ್ರಹ್ಮಗಿರಿ ನಾಯರ್ ಕೆರೆ ಬಳಿಯ ಹಾಶ್ಮಿ ಮಸೀದಿಯಲ್ಲಿ ಶುಕ್ರವಾರ ಈದ್-ಉಲ್-ಫಿತ್ರ್ ಹಬ್ಬವನ್ನು ವಿಶಿಷ್ಠವಾಗಿ ಆಚರಿಸಿದರು.
ಬೆಳಿಗ್ಗೆ 8.30 ಕ್ಕೆ ಮೌಲಾನಾ ಹಾಶ್ಮಿ ಉಮ್ರಿ ದುವಾಶೀರ್ವಚನ ನೀಡಿ ಹಬ್ಬದ ಮಹತ್ವವನ್ನು ಸಾರಿದರು. ಮಸೀದಿಯಲ್ಲಿ ಮುಸ್ಲಿಮರು ನೂರಾರು ಸಂಖ್ಯೆಯಲ್ಲಿ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ನಂತರ ಮಕ್ಕಳು, ವೃದ್ಧರು, ಮಹಿಳೆಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಆಪ್ತರನ್ನು ಮನೆಗೆ ಆಹ್ವಾನಿಸಿ ಬಗೆಬಗೆಯ ತಿಂಡಿತಿನಿಸು ಉಣಬಡಿಸಿ ಸೀರ್ಖುರ್ಮಾ ನೀಡಿ ಸಂತೋಷಪಟ್ಟರು.
ಇದಕ್ಕಿಂತಲೂ ಮುಖ್ಯವಾಗಿ ಹಬ್ಬದ ಪ್ರಾರ್ಥನೆಯ ಬಳಿಕ ಮೌಲಾನಾ ಹಾಶ್ಮಿ ನೇತೃತ್ವದಲ್ಲಿ ಮಸೀದಿಯ ಸಮಿತಿಯ ಸದಸ್ಯರು ಮಸೀದಿ ಅಕ್ಕಪಕ್ಕದಲ್ಲಿರುವು ಹಿಂದೂ ಮತ್ತು ಕ್ರೈಸ್ತ ಭಾಂಧವರ ಮನೆಗಳಿಗೆ ಭೇಟಿ ನೀಡಿ ಸಿಹಿ ಹಂಚಿ ಹಬ್ಬದ ಸಂಭ್ರಮವನ್ನು ಪರಸ್ಪರ ಹಂಚಿಕೊಂಡರು.