ಹಿಂದೂ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ಬಿಟ್ಟು ಕೊಡಿ’ ಸರ್ಕಾರಕ್ಕೆ ಪೇಜಾವರ ಶ್ರೀ ಆಗ್ರಹ 

Spread the love

ಹಿಂದೂ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ಬಿಟ್ಟು ಕೊಡಿ’ ಸರ್ಕಾರಕ್ಕೆ ಪೇಜಾವರ ಶ್ರೀ ಆಗ್ರಹ 

ಮಂಗಳೂರು: ಹಿಂದೂ ದೇವಾಲಯಗಳಿಗೆ ಅದರದ್ದೇ ಆದ ನಿಯಮಗಳಿವೆ ಆದ್ದರಿಂದ ಹಿಂದೂ ದೇವಾಲಯಗಳನ್ನು ಹಿಂದೂ ಸಮಾಜವೇ ನಿರ್ವಹಿಸಬೇಕಾಗಿದ್ದು ಎಲ್ಲಾ ಹಿಂದೂ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ಬಿಟ್ಟು ಕೊಡಬೇಕೆಂದು ಉಡುಪಿ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಂಗಳೂರು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಇತರ ಧರ್ಮಿಯರಲ್ಲಿ ಅವರ ಧಾರ್ಮಿಕ ಸಂಸ್ಥೆಗಳನ್ನು ನಡೆಸುವ ಜವಾಬ್ದಾರಿಯನ್ನು ಅವರ ಸಮುದಾಯಕ್ಕೆ ನೀಡಲಾಗಿದೆ. ನಮ್ಮ ದೇಶದಲ್ಲಿ ಹಿಂದೂ ದೇವಾಲಯಗಳು ಮಾತ್ರ ಸರ್ಕಾರದ ಕಪಿಮುಷ್ಠಿಯಲ್ಲಿವೆ. ಹಿಂದೂಗಳಿಗೆ ಅವರದ್ದೇ ಆದ ನೀತಿ ನಿಯಮಾವಳಿಗಳು ಇವೆ. ಅದನ್ನು ಬಲ್ಲವರ ಮೂಲಕ ಧಾರ್ಮಿಕ ಶ್ರದ್ಧಾಕೇಂದ್ರ ಮುನ್ನಡೆಸಿದರೆ ಅಪಚಾರ ಆಗುವುದಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರವನ್ನು ವಿಶ್ವಸ್ಥ ಮಂಡಳಿಯ ಮೂಲಕ ನಿರ್ವಹಿಸಲಾಗುತ್ತಿದೆ. ಅದೇ ರೀತಿ ಹಿಂದೂ ದೇವಾಲಯಗಳನ್ನು ಹಿಂದೂ ಸಮಾಜವೇ ನಡೆಸಲು ಅವಕಾಶ ನೀಡಬೇಕೆಂದರು.ಹಾಗಾಗಿ ಎಲ್ಲಾ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ನೀಡಬೇಕು. ಪ್ರಾಚೀನ ದೇವಾಲಯಗಳನ್ನು ಸರ್ಕಾರ ತನ್ನ ಕೈಯಲ್ಲಿರಿಸಿಕೊಂಡಿದೆ. ವಿಶ್ವಸ್ಥ ಮಂಡಳಿ ಅಡಿಯಲ್ಲಿ ಅಯೋಧ್ಯೆಯ ರಾಮಮಂದಿರ ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿಯನ್ನು ಎಲ್ಲ ದೇವಾಲಯಗಳಲ್ಲಿ ಅನುಸರಿಸಬೇಕು ಎಂದು ಹೇಳಿದರು.


Spread the love
Subscribe
Notify of

0 Comments
Inline Feedbacks
View all comments