ಹಿಂದೂ ನಾಯಕರ ಹತ್ಯಾ ಪ್ರಕರಣದ ತನಿಖೆಯನ್ನು ಎನ್‍ಐಎ ಗೆ ವಹಿಸಿ ; ಹಿಂದೂ ಜನಜಾಗೃತಿ ಸಮಿತಿ

Spread the love

ಹಿಂದೂ ನಾಯಕರ ಹತ್ಯಾ ಪ್ರಕರಣದ ತನಿಖೆಯನ್ನು ಎನ್‍ಐಎ ಗೆ ವಹಿಸಿ ; ಹಿಂದೂ ಜನಜಾಗೃತಿ ಸಮಿತಿ

ಉಡುಪಿ: ಶರತ ಮಡಿವಾಳ ಹತ್ಯೆ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ನಡೆದ ಸರಣಿ ಹಿಂದೂ ನಾಯಕರ ಹತ್ಯಾ ಪ್ರಕರಣದ ತನಿಖೆಯನ್ನು ಎನ್‍ಐಎ ಗೆ ನೀಡಬೇಕು & ವಿಶೇಷ ತುರ್ತು ಕೋರ್ಟ ಸ್ಥಾಪಿಸಿ, ಪ್ರಕರಣದ ಅಪರಾಧಿಗಳಿಗೆ ಕಠೋರ ಶಿಕ್ಷೆ ನೀಡಬೇಕು ಎಂದು ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದ.ಕ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಕುಮಾರ್ ಇವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಜಿಹಾದಿ ಭಯೋತ್ಪಾದಕರು ಕರ್ನಾಟಕ ರಾಜ್ಯದಲ್ಲಿ ಕಳೆದ 2 ವರ್ಷದಲ್ಲಿ 24 ಹಿಂದೂ ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬೆಂಗಳೂರು ರುದ್ರೇಶ ಹತ್ಯೆಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ಮಾಡಿದಾಗ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಹಿಂದೆ ಮತೀಯ ಶಕ್ತಿಗಳ ಕೈವಾಡ ಇದೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಧ್ಯೇಯದಿಂದ ಯೋಜನಾಬದ್ಧವಾಗಿ ದಕ್ಷಿಣ ಭಾರತದಲ್ಲಿ ಹಿಂದೂ ನಾಯಕರನ್ನು ಗುರಿ ಮಾಡಿ ಹತ್ಯೆ ಮಾಡಲಾಗುತ್ತಿದೆ. ಇದಕ್ಕಾಗಿ ಪಕ್ಕದ ಕೇರಳದಲ್ಲಿ ತರಬೇತಿಯನ್ನು ಸಹ ನಿಷೇಧಿತ ಸಂಘಟನೆಯಿಂದ ನೀಡಲಾಗುತ್ತದೆ ಎನ್ನುವ ಭಯಾನಕ ಅಂಶವನ್ನು ಬೆಳಕಿಗೆ ತಂದಿತ್ತು. ತದನಂತರ ರಾಜ್ಯ ಪೋಲಿಸ್ ಇಲಾಖೆಯು ಈ ಪ್ರಕರಣದ ತನಿಖೆಯ ಹೊಣೆಯನ್ನು ಹೊತ್ತಿತು. ಆದರೆ ರಾಜ್ಯ ಸರಕಾರ ಅಲ್ಪಸಂಖ್ಯಾತರ ಓಲೈಕೆಯ ಕಾರಣದಿಂದ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಯನ್ನು ಮಾಡುತ್ತಿಲ್ಲ. ರಾಜ್ಯ ಸರಕಾರವೇ ರಾಜ್ಯದ ಮತಾಂಧ ಸಂಘಟನೆ ಪಿಎಫ್‍ಐ, ಕೆಎಫ್‍ಡಿಯ ಮೇಲೆ ಇದ್ದ 175 ದಂಗೆಯ ಅಪರಾಧದ ಪ್ರಕರಣವನ್ನು ಕ್ಯಾಬಿನೆಟ್‍ನಲ್ಲಿ ಹಿಂಪಡೆಯಿತು. ಇದಕ್ಕೆ ಸ್ವತಃ ಪೋಲಿಸ್ ಇಲಾಖೆಯು ವಿರೋಧ ವ್ಯಕ್ತ ಪಡಿಸಿತ್ತು. ಅಷ್ಟೇ ಅಲ್ಲದೇ ರಾಜ್ಯದ ಪ್ರಾಮಾಣಿಕ ಪೋಲಿಸ್ ಅಧಿಕಾರಿಗಳನ್ನು ನಿಷ್ಪಕ್ಷವಾಗಿ ತನಿಖೆ ಮಾಡಲು ಬಿಡುತ್ತಿಲ್ಲ. ಬದಲಾಗಿ ಅವರಿಗೆ ಕಿರುಕುಳ, ಎತ್ತಂಗಡಿ ಮುಂತಾದವುಗಳ ಮೂಲಕ ತನಿಖೆಗೆ ಅಡ್ಡಿಪಡಿಸುತ್ತಿದೆ. ಇದರ ಪರಿಣಾಮವಾಗಿ ಅನೇಕ ಹಿಂದೂ ನಾಯಕರ ಹತ್ಯೆಯ ಪ್ರಕರಣದಲ್ಲಿ ಅಪರಾಧಿಗಳು ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಈಗ ಪುನಃ ಬಂಟ್ವಾಳದಲ್ಲಿ ಶರತ ಮಡಿವಾಳ ಎಂಬ ಸಂಘದ ಸ್ವಯಂ ಸೇವಕನನ್ನು ಬರ್ಬರವಾಗಿ ಮತಾಂಧರು ಹತ್ಯೆ ಮಾಡಿದರು. ಈ ಹತ್ಯೆಯ ನಂತರ “ಮಂಗಳೂರುಮುಸ್ಲಿಂ” ಎನ್ನುವ ಫೇಸ್‍ಬುಕ್ ಪೇಜನಲ್ಲಿ ಬಂಟ್ವಾಳದಲ್ಲಿ ಒಂದು ವಿಕೆಟ್ ಹೋಯ್ತು, ಕಲ್ಲಡ್ಕದ ವಿಕೆಟ್ ಯಾವಾಗ ಬೀಳುವುದು? ಎಂದು ಪ್ರಚೋದನಾಕಾರಿ ಕಮೆಂಟ್ ಹಾಕಲಾಗಿತ್ತು. ಆದರೆ ರಾಜ್ಯ ಸರಕಾರ ಇದರ ಮೇಲೆ ಕ್ರಮಕೈಗೊಳ್ಳುವ ಬದಲು, ಶರತ ಹತ್ಯೆಯ ನಂತರ ನಿಜವಾದ ಅರೋಪಿಗಳನ್ನು ಬಂಧಿಸದೇ, ವಿನಾಕಾರಣ ಅಮಾಯಕ ಹಿಂದೂನಾಯಕರನ್ನು ಬಂಧಿಸಲು ಪಿತೂರಿ ನಡೆಸಿತು. ಅಷ್ಟೇಅಲ್ಲದೇ ರಾಜ್ಯಸರಕಾರ ಶರತ ಆಸ್ಪತ್ರೆಯಲ್ಲಿ ಮೃತವಾದ ವಾರ್ತೆಯನ್ನು ಒಂದು ದಿನ ತಡವಾಗಿ ಪ್ರಕಟಿಸಲು ಆಸ್ಪತ್ರೆಯ ಮೇಲೆ ಒತ್ತಡ ಹೇರಿತು. ಒಟ್ಟಾರೆ, ಈ ಎಲ್ಲಾ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ರಾಜ್ಯದ ಕಾಂಗ್ರೆಸ್ ಸರಕಾರವೇ ನೇರವಾಗಿ ಹಿಂದೂ ನಾಯಕರ ಹತ್ಯೆಯ ಪಿತೂರಿಯ ಹಿಂದೆ ಇದೆ ಎಂಬುದು ಸ್ಪಷ್ಟವಾಗುತ್ತಿದೆ ಮತ್ತು ಸಾರ್ವಜನಿಕರಲ್ಲಿಯೂ ಸಂದೇಹ ಮೂಡುತ್ತಿದೆ. ಅದಕ್ಕಾಗಿ ಈ ಪ್ರಕರಣವು ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಮತ್ತು ಹತ್ಯೆಯ ಹಿಂದಿನ ನಿಜವಾದ ಕೈವಾಡ ಹೊರಬರಬೇಕು ಹಾಗೂ ಸಂಬಂಧಿತರಿಗೆ ಕಠೋರ ಶಿಕ್ಷೆಯಾಗಬೇಕೆಂದು ಕೇಂದ್ರ ಸರಕಾರ ಮಧ್ಯ ಪ್ರವೇಶ ಮಾಡಬೇಕು. ಕೇಂದ್ರದ ರಾಷ್ಟ್ರೀಯ ತನಿಖಾದಳದಿಂದ ವಿಶೇಷ ಅನ್ವೇಷಣೆ ಆಗಬೇಕು. ಈ ಪ್ರಕರಣವನ್ನು ಬೇಗ ಬೇಧಿಸಲು ಪ್ರತ್ಯೇಕ ತುರ್ತು ಕೋರ್ಟ ಸ್ಥಾಪಿಸಬೇಕೆಂದು ಆಗ್ರಹಿಸುತ್ತೇವೆ.

ಅಮರನಾಥ ಯಾತ್ರಿಕರ ಮೇಲೆ ಆಕ್ರಮಣ ನಡೆಸಿದ ಜಿಹಾದಿ ಉಗ್ರರನ್ನು ಹಾಗೂ ಪಾಕಿಸ್ತಾನವನ್ನು ನಾಶ ಮಾಡಿ !
ಶ್ರೀ ಅಮರನಾಥ ಯಾತ್ರೆಗೆ ಬಿಗಿ ಭದ್ರತೆಯಿದ್ದರೂ ಜುಲೈ 10, 2017ರಂದು ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದನೆಯ ಆಕ್ರಮಣವಾಯಿತು, ಅದರಲ್ಲಿ 7 ಜನರು ಮೃತಪಟ್ಟಿದ್ದು 19 ಜನರು ಗಾಯಗೊಂಡರು. ಈ ಘಟನೆಯು ಬಹಳ ಗಂಭೀರ ಹಾಗೂ ಚಿಂತಾಜನಕವಾಗಿದೆ. ಎರಡು ವರ್ಷಗಳ ಹಿಂದೆ ಕೂಡ ಉಗ್ರರು ಆಕ್ರಮಣ ನಡೆಸಿ, ಲಂಗರ್ ಅನ್ನು ಸುಟ್ಟು ಹಾಕಿದರು ಹಾಗೂ ಅದರಲ್ಲಿ 24 ಜನರು ಗಾಯಗೊಂಡರು. ಇದೆಲ್ಲವನ್ನೂ ಪಾಕಿಸ್ತಾನವೇ ಮಾಡಿಸುತ್ತಿದೆ, ಎಂಬುದು ಈಗ ಸ್ಪಷ್ಟವಾಗಿದೆ. ಆದ್ದರಿಂದ ಅಮರನಾಥ ಯಾತ್ರಿಗಳ ಮೇಲೆ ಆಕ್ರಮಣ ಮಾಡುವ ಧೈರ್ಯವನ್ನು ಮಾಡದಿರಲು ಪಾಕಿಸ್ತಾನ ಹಾಗೂ ಕಾಶ್ಮೀರದ ಉಗ್ರರಿಗೆ ಪಾಠಕಲಿಸಬೇಕು ಹಾಗೂ ಪಾಕಿಸ್ತಾನಕ್ಕೆ ನೀಡಿರುವ `Most Favored Nation’ ಶ್ರೇಣಿಯನ್ನು ತೆಗೆದು ಹಾಕುವುದಕ್ಕೆ ಮನವಿ ಮಾಡಲಾಯಿತು.

ಬಂಗಾಳವು ಬಾಂಗ್ಲಾದೇಶವಾಗುವುದರ ಮುನ್ನ ಅಲ್ಲಿ `ರಾಷ್ಟ್ರಪತಿ ಶಾಸನ’ವನ್ನು ಅನ್ವಯಿಸಿರಿ !
ಓರ್ವ ವಿಧ್ಯಾರ್ಥಿಯು ತನ್ನ ಫೇಸ್‍ಬುಕ್ ಮೇಲೆ ವಿವಾದಾತ್ಮಕ ವಿಷಯವನ್ನು ಪೋಸ್ಟ್ ಮಾಡಿದನು ಹಾಗೂ ಇದನ್ನು ನಿಮಿತ್ತ ಮಾಡಿಕೊಂಡು ಕಳೆದ ಕೆಲವು ದಿನಗಳಿಂದ ಬಂಗಾಳದಲ್ಲಿ ಜಿಹಾದಿ ಮತಾಂಧರು ತೊಂದರೆ ನೀಡುತ್ತಿದ್ದಾರೆ. ಸಾವಿರಾರು ಮತಾಂಧರು ಉತ್ತರ 24 ಪರಗನಾ ಜಿಲ್ಲೆಯ ಬಶೀರಹಾಟ್ ಹಾಗೂ ಬದುರಿಯಾ ಕ್ಷೇತ್ರದಲ್ಲಿರುವ ಹಿಂದೂಗಳ ಮೇಲೆ ಪ್ರಾಣಘಾತಕ ಆಕ್ರಮಣ ನಡೆಸಿ, ಅಲ್ಲಿನ ನೂರಾರು ಮನೆಗಳನ್ನು ಹಾಗೂ ದೇವಾಲಯಗಳನ್ನು ಧ್ವಂಸ ಮಾಡಿದ್ದಾರೆ, ಈ ವೇಳೆಯಲ್ಲಿ 35 ಹಿಂದೂಗಳು ಗಾಯಗೊಂಡರು, ಅನೇಕ ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ನಡೆಸಲಾಯಿತು. ಇಷ್ಟಾದರೂ ಬಂಗಾಳದಲ್ಲಿನ ಶಾಸನವು ಮತಾಂಧ ಮುಸಲ್ಮಾನರನ್ನು ಪೋಷಿಸುತ್ತಾ ನಿಷ್ಕ್ರಿಯಗೊಂಡಿದೆ. ರಾಜ್ಯಪಾಲರು ಗಮನಕ್ಕೆ ತಂದುಕೊಟ್ಟರೂ ಅಲ್ಲಿನ ಶಾಸನವು ಯಾವುದೇ ಕಾರ್ಯಾಚರಣೆಯನ್ನು ನಡೆಸುತ್ತಿಲ್ಲ. ಈಗ ಮೋದಿ ಸರಕಾರವು ಬಂಗಾಳವು ಬಾಂಗ್ಲಾದೇಶವಾಗುವ ತನಕ ಕಾಯುವುದು ಬೇಡ. ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಲ್ಕೆಳಗೆ ಮೆಟ್ಟುತ್ತಿರುವ ಬಂಗಾಳ ಸರಕಾರವನ್ನು ತಕ್ಷಣ ವಜಾ ಮಾಡಿ ಅಲ್ಲಿ ರಾಷ್ಟ್ರಪತಿ ಶಾಸನವನ್ನು ಅನ್ವಯಿಸಿ ಅಲ್ಲಿನ ಹಿಂದೂಗಳನ್ನು ರಕ್ಷಿಸಲಿ.

ಚೈನಾ ಡ್ರಾಗನ್ ಅನ್ನು ತಡೆಯಲು ಚೀನಾದ ವಸ್ತುಗಳನ್ನು ಬಹಿಷ್ಕರಿಸಿರಿ !
ಚೈನಾವು ಕೈಲಾಸ ಮಾನಸಸರೋವರ ಯಾತ್ರೆಗೆ ಹೋಗುತ್ತಿದ್ದ ಭಾರತೀಯ ನಾಗರಿಕರನ್ನು ನಾಥೂಲಾ ದರ್ರೆಯಿಂದ ಮುಂದೆ ಹೋಗಲು ತಡೆದರು. ಅವರು ಭೂತಾನ್-ಭಾರತ- ಚೀನಾ ಗಡಿಯಿಂದ ನುಗ್ಗಿ ಬಂದು, ಸಿಕ್ಕಿಮ್‍ನ ಡೊಕಲಾಮ್ ಕ್ಷೇತ್ರದ ಗಡಿ ದಾಟಿದರು ಹಾಗೂ ಭಾರತೀಯ ಬಂಕರ್‍ಗಳನ್ನು ಬುಲ್ಡೋಝರ್‍ನಿಂದ ನಾಶ ಮಾಡಿದರು. ಆದರೂ ಭಾರತ ಸರಕಾರವು ಚೀನಾದೊಂದಿಗೆ ವ್ಯಾಪಾರ ಹೆಚ್ಚಿಸಿ ಮನೆ-ಮನೆಗೂ ಚೈನಾ `ಡ್ರಾಗನ್’ಅನ್ನು ನುಗ್ಗಿಸುತ್ತಿದೆ. ಭಾರತವನ್ನು ನಿರಂತರವಾಗಿ ವಿರೋಧಿಸಿ ಯುದ್ಧದ ಬೆದರಿಕೆ ಒಡ್ಡುವ ಚೀನಾಗೆ ಈಗ ಪಾಠ ಕಲಿಸುವ ಸಮಯ ಬಂದಿದೆ. ಭಾರತೀಯ ಸೈನಿಕರು ಚೀನಾ ಗಡಿಯಲ್ಲಿ ದೇಶವನ್ನು ರಕ್ಷಿಸುತ್ತಿರುವ ರೀತಿಯಲ್ಲಿ ಭಾರತೀಯ ಅರ್ಥವ್ಯವಸ್ಥೆಯನ್ನು ಚೈನಾ ಡ್ರಾಗನ್‍ನ ಬಿಗಿ ಹಿಡಿತದಿಂದ ಬಿಡಿಸಲು ಪ್ರತಿಯೊಬ್ಬ ಭಾರತೀಯನೂ ಕೂಡ ಪ್ರಯತ್ನಿಸಬೇಕು. ಆದ್ದರಿಂದ ಭಾರತೀಯ ಜನತೆಯು ಚೀನಾ ವಸ್ತುಗಳನ್ನು ಬಹಿಷ್ಕರಿಸಿರಿ, ಸ್ವದೇಶೀ ವಸ್ತುಗಳನ್ನು ಉಪಯೋಗಿಸಿ ಹಾಗೂ ಭಾರತ ಸರಕಾರವು ಚೀನಾಗೆ ಸಂಬಂಧಪಟ್ಟಂತೆ ತನ್ನ ವ್ಯಾಪಾರನೀತಿಯ ಮೇಲೆ ಪುನರ್ವಿಚಾರ ಮಾಡಲಿ, ಅವರಿಗೆ ಆರ್ಥಿಕ ಮುಗ್ಗಟ್ಟು ಉಂಟುಮಾಡಲಿ.

ಇದೇ ವೇಳೆಯಲ್ಲಿ ಸಾಧ್ವಿ ಪ್ರಜ್ಞಾಸಿಂಗ್‍ರವರನ್ನು ಹುಸಿ ಆರೋಪದ ಕೆಳಗೆ 8 ವರ್ಷ ಕಾರಾಗೃಹದಲ್ಲಿಟ್ಟು ಅವರ ಮೇಲೆ ಭೀಕರ ಅತ್ಯಾಚಾರ ಮಾಡುವ ಪೋಲೀಸು ಅಧಿಕಾರಿಗಳ ಹಾಗೂ ಷಡ್ಯಂತ್ರ ರಚಿಸಿದ ಆಡಳಿತಗಾರರ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕು, ನಕ್ಸಲವಾದಿಗಳೊಂದಿಗೆ ಸಂಪರ್ಕ ಹೊಂದಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾ. ನಂದಿನಿ ಸುಂದರ್ ಹಾಗೂ ಮಾನವಾಧಿಕಾರ ಕಾರ್ಯಕರ್ತೆ ಬೆಲಾ ಭಾಟಿಯಾರ ವಿರುದ್ಧ ಕಾರ್ಯಾಚರಣೆ ನಡೆಯಲಿ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಆರೋಪಿ ಡಾ. ಝಾಕೀರ್ ನಾಯಿಕ್ ಹಾಗೂ ಅವನ ನಿರ್ಬಂಧಿತ ಸಂಸ್ಥೆ `ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ನ `ಫೇಸ್‍ಬುಕ್ ಅಕೌಂಟ್’ಅನ್ನು ತಕ್ಷಣ ತಡೆಯಲಿ, ಎಂದು ಬೇಡಿಕೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ದ.ಕ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೇರ, ಸತೀಶ, ಸುರೇಶ, ಮಹೇಶ,ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ, ಪ್ರಥಮೇಶ ಮತ್ತಿತರರು ಉಪಸ್ಥಿತರಿದ್ದರು.


Spread the love