ಹಿಂದೂಗಳು ಸಂಘಟಿತರಾದರೆ ರಾಮಮಂದಿರವನ್ನು ಸಹಜವಾಗಿ ಕಟ್ಟಬಹುದು – ಭಾಜಪ ಶಾಸಕ ಟಿ.ರಾಜಾ ಸಿಂಗ್
ಗೋವಾ : ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕೆಂಬುದು ಪ್ರತಿಯೊಬ್ಬ ಹಿಂದೂವಿನ ಇಚ್ಛೆಯಾಗಿದೆ. ರಾಜಕೀಯ ಪಕ್ಷಗಳು ಚುನಾವಣೆಯ ಮೊದಲು ರಾಮಮಂದಿರದ ವಿಷಯ ತೆಗೆದುಕೊಳ್ಳುತ್ತವೆ ಮತ್ತು ಚುನಾವಣೆಯ ನಂತರ ಮರೆತು ಬಿಡುತ್ತವೆ. ಅದಕ್ಕಾಗಿ ದೇಶದಲ್ಲಿನ ಪ್ರತಿಯೊಬ್ಬ ಹಿಂದೂವು ಸಂಘಟಿತರಾದರೆ ಮತ್ತು ಅವರು ರಾಮಮಂದಿರಕ್ಕಾಗಿ ಒಮ್ಮತದಿಂದ ಆಗ್ರಹಿಸಿದರೆ ರಾಮಮಂದಿರವನ್ನು ಸಹಜವಾಗಿ ಕಟ್ಟಬಹುದು. ಹಿಂದೂ ಯುವಕರು ಸಂಘಟಿತರಾಗಬೇಕು ಮತ್ತು ಶಕ್ತಿಯನ್ನು ಹೆಚ್ಚಿಸಬೇಕು. ಈ ಶಕ್ತಿ ಹೆಚ್ಚಾದರೆ ಹಿಂದುತ್ವದ ಕಾರ್ಯ ಮಾಡುವುದರಿಂದ ಯಾರೂ ಅವರನ್ನು ತಡೆಯಲಾರರು. ಮೊದಲು ಧರ್ಮ ಅನಂತರ ರಾಜಕಾರಣ ಎಂದು ಅಬ್ಬರಿಸಿ ಹೇಳಬೇಕಾದ ಸಮಯ ಈಗ ಬಂದಿದೆ ಎಂಬ ಜಾಜ್ವಲ್ಯ ಮಾರ್ಗದರ್ಶನವನ್ನು ಭಾಗ್ಯನಗರದ (ಹೈದರಾಬಾದ್) ತೆಲಂಗಾಣದ ಶಾಸಕ ಮತ್ತು ಶ್ರೀರಾಮ ಯುವ ಸೇನೆಯ ಸಂಸ್ಥಾಪಕ ಶ್ರೀ.ಟಿ.ರಾಜಾ ಸಿಂಗ್ ಇವರು ಮಾಡಿದರು. ಅವರು ಗೋವಾದ ರಾಮನಾಥಿ ದೇವಸ್ಥಾನದಲ್ಲಿ ನಡೆಯುತ್ತಿರುವ ಆರನೇ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ದ ಮೂರನೇ ದಿನದಂದು ‘ಸರಕಾರಿ ದುಷ್ಪ್ರವೃತ್ತಿಗಳ ವಿರುದ್ಧದ ಕಾರ್ಯ’ ಈ ವಿಷಯದ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು.
ಶ್ರೀ.ಟಿ.ರಾಜಾ ಸಿಂಗ್
ಸಾಮಾಜಿಕ ದುಷ್ಪ್ರವೃತ್ತಿಗಳ ವಿರುದ್ಧ ವ್ಯಾಪಕ ಹೋರಾಟ ನಡೆಸುವುದು ಅಪೇಕ್ಷಿತ – ರಮೇಶ ಶಿಂದೆ, ಹಿಂದೂ ಜನಜಾಗೃತಿ ಸಮಿತಿ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡಕರರು, ಸಂವಿಧಾನವು ಎಷ್ಟೇ ಒಳ್ಳೆಯದಿದ್ದರೂ ಅದನ್ನು ಜ್ಯಾರಿಗೆ ತರುವ ರಾಜಕಾರಣಿಗಳು ಸಕ್ಷಮರಾಗಿದ್ದರೆ ಮಾತ್ರ ಪ್ರಜಾಪ್ರಭುತ್ವವು ಯಶಸ್ವಿಯಾಗುತ್ತದೆ ಎಂದು ಹೇಳಿದ್ದರು. ಅದಕ್ಕನುಸಾರ ಇಂದು ಸಂಸತ್ತಿನಲ್ಲಿರುವ ಅನೇಕ ಸದಸ್ಯರು ಭ್ರಷ್ಟ ಮತ್ತು ಅಪರಾಧಿಗಳಾಗಿರುವುದರಿಂದ ಪ್ರಜಾಪ್ರಭುತ್ವವು ವಿಫಲವಾಗಿರುವುದು ೭೦ ವರ್ಷಗಳಲ್ಲಿ ಕಣ್ಣೆದುರು ಕಾಣಿಸುತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬದಲಾಯಿಸಲು ಸಮಾಜವು ನಿದ್ರಿತವಾಗಿರದೆ ಪ್ರಜಾಪ್ರಭುತ್ವವು ನೀಡಿದ ಮಾರ್ಗವನ್ನು ಉಪಯೋಗಿಸಿ ಮುಂದಾಳತ್ವ ವಹಿಸಿ ಕೃತಿ ಮಾಡಬೇಕಾಗುವುದು. ಪ್ರತಿಭಟನೆ, ಜನಹಿತ ಅರ್ಜಿ, ಮಾಹಿತಿ ಹಕ್ಕುಗಳ ಉಪಯೋಗ, ದೂರು, ನಿವೇದನೆ ಹಾಗೂ ಪ್ರತಿಯೊಂದು ನ್ಯಾಯಯುತ ಮಾರ್ಗವನ್ನು ಅವಲಂಬಿಸಿ ಪ್ರಜಾಪ್ರಭುತ್ವದಲ್ಲಿನ ಸಾಮಾಜಿಕ ದುಷ್ಪ್ರವೃತ್ತಿಗಳ ವಿರುದ್ಧ ವ್ಯಾಪಕ ಹೋರಾಟವನ್ನು ನಡೆಸಬೇಕಾಗುವುದು. ಈ ಹೋರಾಟವೇ ಆದರ್ಶ ವ್ಯವಸ್ಥೆಯ ದಿಶೆಯಿಂದ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆಯತ್ತ ಮಾರ್ಗಕ್ರಮಣವಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ.ರಮೇಶ ಶಿಂದೆಯವರು ಪ್ರತಿಪಾದಿಸಿದರು
ಶ್ರೀ.ರಮೇಶ ಶಿಂದೆ
ಈ ಸಮಯದಲ್ಲಿ ತೆಲಂಗಾಣದ ಶಿವಸೇನೆಯ ರಾಜ್ಯಪ್ರಮುಖ ಶ್ರೀ.ಟಿ.ಎನ್.ಮುರಾರಿಯವರು, “ತೆಲಂಗಾಣ ರಾಜ್ಯದಲ್ಲಿ ಅಧಿಕಾರಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ‘ಅಲ್ಪಸಂಖ್ಯಾತರ ಓಲೈಕೆ ಮತ್ತು ಬಹುಸಂಖ್ಯಾತ ಹಿಂದೂಗಳ ಮೇಲೆ ಅನ್ಯಾಯ’ ಎಂಬ ಧೋರಣೆಯನ್ನು ಅವಲಂಬಿಸುತ್ತಿದೆ ಎಂದರು. ಈ ಚರ್ಚೆಯಲ್ಲಿ ಪುಣೆಯ ಮಾಹಿತಿ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶ್ರೀ.ಚಂದ್ರಕಾಂತ ವಾರಘಡೆ ಇವರು, ‘ಸನ್ಬರ್ನ ಫೆಸ್ಟಿವಲ್’ ನ ವಿರುದ್ಧ ಮಾಹಿತಿ ಹಕ್ಕುಗಳ ಅಧಿಕಾರವನ್ನು ಉಪಯೋಗಿಸಿ ಮಾಡಿದ ಕಾರ್ಯದ ಮಾಹಿತಿಯನ್ನು ನೀಡಿದರು. ಹಾಗೆಯೇ ಬಂಗಾಲದ ಶಾಸ್ತ್ರ ಧರ್ಮ ಪ್ರಚಾರ ಸಭೆಯ ಕಾರ್ಯದರ್ಶಿ ಶ್ರೀ. ಶಿವನಾರಾಯಣ ಸೇನ ಇವರು ‘ಹಿಂದೂಗಳನ್ನು ಧರ್ಮನಿಷ್ಠ ಅರ್ಥಾತ್ ಶಾಸ್ತ್ರನಿಷ್ಠ ಮಾಡುವುದರ ಅವಶ್ಯಕತೆ ಇದೆ’ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು