ಹೆದ್ದಾರಿ ದರೋಡೆಗೆ ಸಂಚು : ಐವರ ಬಂಧನ

Spread the love

ಹೆದ್ದಾರಿ ದರೋಡೆಗೆ ಸಂಚು : ಐವರ ಬಂಧನ

ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ವಾಹನಗಳನ್ನು ತಡೆದು ಹಣ, ಚಿನ್ನಾಭರಣ ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಪುತ್ತೂರು ನಿವಾಸಿ ರವಿಕುಮಾರ್ (24), ಮಂಜ್ವೇಶ್ವರ ನಿವಾಸಿ ಖಲೀಲ್ ಕೆ (27), ರಾಜೇಶ್ (30), ಅಝೀಮ್ (23), ಚಾಬೀರ್ (24) ಎಂದು ಗುರುತಿಲಾಗಿದೆ.

ಅಕ್ಟೋಬರ್ 22 ರಂದು ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ಕಲ್ಪಾಪು ಎಂಬಲ್ಲಿ ರಾಹೆ 66 ರಲ್ಲಿ ರಾತ್ರಿ ಸಮಯ ಕೇರಳ ಕಡೆಯಿಂದ ಮಂಗಳೂರು ಕಡೆಗೆ ಹಾದುಹೋಗುವ ಮತ್ತು ಮಂಗಳೂರು ವಿಮಾನ ನಿಲ್ದಾಣ ಕಡೆಯಿಂದ ಹಾದು ಹೋಗುವ ಮತ್ತು ಮಂಗಳೂರು ವಿಮಾನ ನಿಲ್ದಾಣ ಕಡೆಯಿಂದ ಬರುವ ಪ್ರಯಾಣಿಕರ ಕಾರುಗಳನ್ನು ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು, ಮಹಿಳೆಯರನ್ನು ನಿರ್ಜನ ಸ್ಥಳದಲ್ಲಿ ತಡೆದು ಅವರ ಸೊತ್ತುಗಳನ್ನು, ಚಿನ್ನಾಭರಣಗಳನ್ನು ಲೂಟಿ ಮಾಡಿ ದರೋಡೆ ಮಾಡಲೂ ಪೂರ್ವ ತಯಾರಿಯನ್ನು ಕ್ರಿಮಿನಲ್ ಸಂಚನ್ನು ರೂಪಿಸುತ್ತಿದ್ದ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಹಳೆಯ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೋಲಿಸ್ ನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಪೋಲಿಸ್ ಉಪನಿರಿಕ್ಷಕರಾದ ರಾಜೇಂದ್ರ ಬಿ, ಮಂಗಳೂರು ದಕ್ಷಿಣ ಉಪ-ವಿಭಾಗದ ರೌಡಿ ನಿಗ್ರಹ ದಳದ ಸಿಬಂದಿಗಳು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯ ನಡೆಸಲು ಹೊಂದಿದ್ದ ಶಸ್ತ್ರಾಸ್ತ್ರ ಕಬ್ಬಿಣದ ತಲವಾರು, ರಾಡ್, ಮೆಣಸಿನ ಹುಡಿ, ಚೂರಿಗಳನ್ನು ಹಾಗೂ ಮಾರುತಿ ಸ್ವಿಫ್ಟ್ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.


Spread the love
1 Comment
Inline Feedbacks
View all comments
Lallu
7 years ago

THEY WILL BE RELEASED !!