ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ: ಸಾಸ್ತಾನದ ಯುವಕನ ವಿರುದ್ದ ಪ್ರಕರಣ ದಾಖಲು
ಕೋಟ: ಹೋಮ್ ಕ್ವಾರಂಟೈನ್ನಲ್ಲಿರಬೇಕೆಂದು ಸೂಚಿಸಿದ್ದರೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಸುತ್ತತ್ತಿದ್ದ ವ್ಯಕ್ತಿಯೊಬ್ಬನ ವಿರುದ್ದ ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಾದ ಯುವಕನನ್ನು ಸಾಸ್ತಾನ ನಿವಾಸಿ ಶಾಬಾ ಸಾಹೇಬ್ ಅವರ ಪುತ್ರ ಝೀಮಾನ್ (20) ಎಂದು ಗುರುತಿಸಲಾಗಿದೆ.
ಕೋವಿಡ್-19 (ಕೊರೊನಾ ವೈರಾಣು ಖಾಯಿಲೆ-2019) ಖಾಯಿಲೆಯು ವ್ಯಾಪಕವಾಗಿ ಹರಡದಂತೆ ರಾಜ್ಯ ಸರ್ಕಾರವು ಮಾರ್ಚ್ 24 ರಿಂದ ಲಾಕ್ ಡೌನ್ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶವನ್ನು ಕಾಪಾಡಲು ಏಪ್ರಿಲ್ 1 ರಂದು ಪಿರ್ಯಾದಿದಾರರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪ್‌ನಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಹೋಮ್ ಕ್ವಾರಂಟೆನ್ ಇರುವ ವ್ಯಕ್ತಿ ಝೀಮಾನ್ ಕೋಡಿ ಸಾಸ್ತಾನ ರಸ್ತೆಯಲ್ಲಿ ಸ್ಕೂಟಿಯಲ್ಲಿ ತಿರುಗುತ್ತಿರುವುದು ಕಂಡು ಬಂದಿದೆ.
ಈತನನ್ನು ಸಾಸ್ತಾನ ಮೀನು ಮಾರ್ಕೆಟ್ ಹತ್ತಿರ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಅವರು ಪ್ರಶ್ನಿಸಿ ಸರ್ಕಾರದ ಆದೇಶದ ಬಗ್ಗೆ ತಿಳಿಸಿದಾಗ ಅಸಂಬದ್ದವಾಗಿ ಉಢಾಪೆಯಾಗಿ ವರ್ತಿಸಿದ್ದು, “ಹೋಮ್ ಕ್ವಾರಂಟೆನ್“ ಆದೇಶ ಇರುವವರಿಗೆ ಸರ್ಕಾರಿ ಸಿಬ್ಬಂದಿಯವರಿಂದ ಹಾಕಿರುವ ಶೀಲ್ ಆತನ ಕೈ ಮೇಲಿರುವುದು ಕಂಡು ಬಂದಿದೆ.
ಈತನ ವಿರುದ್ದ ಕೋಟ ಠಾಣೆಯಲ್ಲಿ ಐಪಿಸಿ ಕಲಂ 188, 270, 271 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಈತನ ಬಳಸುತ್ತಿದ್ದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ